×
Ad

ಬಸ್‌ನಿಂದ ಬಿದ್ದು ಪ್ರಯಾಣಿಕನಿಗೆ ಗಾಯ

Update: 2017-05-09 22:07 IST

ಮಂಗಳೂರು, ಮೇ 9: ಬಸ್ ಹತ್ತುತ್ತಿದ್ದಾಗ ಚಾಲಕನ ನಿರ್ಲಕ್ಷದಿಂದ ಪ್ರಯಾಣಿಕ ಕೆಳಗೆ ಬಿದ್ದು ಗಾಯಗೊಂಡ ಘಟನೆ ಕುಲಶೇಖರ ಸಮೀಪ ನಡೆದಿದೆ.

ತಾರನಾಥ ಎಂಬವರು ಕುಲಶೇಖರದಲ್ಲಿ ಪೈಂಟಿಂಗ್ ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗಲು 3 ನಂಬ್ರದ ಬಸ್ಸನ್ನು ಹತ್ತಿದಾಗ, ಚಾಲಕ ಝೈನುದ್ದೀನ್ ನಿರ್ವಾಹಕನ ಸೂಚನೆಗೆ ಕಾಯದೆ ಬಸ್ಸನ್ನು ಚಲಾಯಿಸಿದ್ದಾನೆ. ಪರಿಣಾಮವಾಗಿ ತಾರನಾಥ ಅವರು ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News