ಬೈಕ್ ಕಳವು
Update: 2017-05-09 22:13 IST
ಮಂಗಳೂರು, ಮೇ 9: ಕಂಕನಾಡಿ ಮೇಲಿನ ಮೊಗರು ಸಮೀಪ ವಸತಿ ಸಂಕೀರ್ಣ ಎದುರು ನಿಲ್ಲಿಸಿದ ಬೈಕ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.
ಸಂಜಯ್ ಎಂಬವರು ಬೈಕನ್ನು ವಸತಿ ಸಂಕೀರ್ಣದ ಎದುರು ನಿಲ್ಲಿಸಿದ್ದರು. ಮರುದಿವಸ ಬಂದು ನೋಡುವಾಗ ಬೈಕ್ ಕಳವಾಗಿರುವುದು ಗೊತ್ತಾಗಿದೆ. ಸುಮಾರು 30ಸಾವಿರ ಎಂದು ತಿಳಿದು ಬಂದಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.