ಪೊಲೀಸರ ಕರ್ತವ್ಯಕ್ಕೆ ಅಡ್ಡಿ : ಆರೋಪಿ ಬಂಧನ
Update: 2017-05-09 22:44 IST
ಭಟ್ಕಳ,ಮೇ 9 : ಪೊಲೀಸರ ಕರ್ತವ್ಯಕೆ ಅಡ್ಡಿಪಡಿಸಿದ ಆರೋಪಿಯನ್ನು ಇಲ್ಲಿನ ನಗರಠಾಣೆ ಪೊಲೀಸರು ಬಂಧಿಸಿದ ಘಟನೆ ಪಟ್ಟಣದ ಜಾಲಿರೋಡ್‌ನಲ್ಲಿ ಮಂಗಳವಾರ ನಡೆದಿದೆ.
ಬಂಧಿತ ಆರೋಪಿಯನ್ನು ಜಾಲಿಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಮಂಜುನಾಥ ನಾರಾಯಣ ನಾಯ್ಕ (24) ಎಂದು ಗುರುತಿಸಲಾಗಿದೆ.ಆರೋಪಿಯು ಮೂರು ಜನರನ್ನು ಬೈಕ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ,ಎಎಸ್‌ಐ ಜೀವಾನಂದ್ ಎಂಬುವರು ತಡೆದು ನಿಲ್ಲಿಸಿದ್ದಕ್ಕಾಗಿ,ಆಕ್ರೊಶ ವ್ಯಕ್ತಪಡಿಸಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.