ತುಂಬೆ ಜುಮಾ ಮಸೀದಿ ಪದಾಧಿಕಾರಿಗಳ ಆಯ್ಕೆ

Update: 2017-05-09 17:30 GMT

ಬಂಟ್ವಾಳ, ಮೇ 9: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ವಾರ್ಷಿಕ ಮಹಾ ಸಭೆ ಇತ್ತೀಚೆಗೆ ಮಸೀದಿಯಲ್ಲಿ ನಡೆಯಿತು. ಸಭೆಯಲ್ಲಿ 2017-18ನೆ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಅಬ್ದುಲ್ ಅಝೀರ್ ಟಿ. ಆಯ್ಕೆಯಾದರು.

ಗೌರವಾಧ್ಯಕ್ಷರಾಗಿ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್, ಜೊತೆ ಕಾರ್ಯದರ್ಶಿಯಾಗಿ ಟಿ.ಎಂ.ಮೂಸಬ್ಬ, ಖಜಾಂಚಿಯಾಗಿ ಮುಹಮ್ಮದ್ ಇಮ್ತಿಯಾರ್ ಆಲ್ಫಾ, ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಇರ್ಫಾನ್ ಆಯ್ಕೆಯಾದರು. ಹಾಗೆಯೇ ಸದಸ್ಯರಾಗಿ ಅಬ್ದುಲ್ ಲತೀಫ್ ಇಮಾಮಿ, ಅಬ್ದುಲ್ ರಹ್ಮಾನ್ ಅದ್ದಾದಿ, ಮುಹಮ್ಮದ್ ಝಹೂರ್, ಮುಹಮ್ಮದ್ ಖಲಂದರ್, ಮುಹಮ್ಮದ್ ಆಸೀಫ್, ಮುಹಮ್ಮದ್ ಇಸಾಕ್, ಅಬ್ದುಲ್ ಅಝೀರ್ ಡಿ., ಮುಹಮ್ಮದ್ ಸಿರಾಜ್, ಇಮ್ತಿಯಾರ್ ಶಾ., ಬಿ.ಮುಹಮ್ಮದ್ ಹನೀಫ್ ಯು.ಪಿ., ಮುಹಮ್ಮದ್ ಶರೀಫ್ ಟಿ.ಕೆ. ಆಯ್ಕೆಯಾಗಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಹಾಜಿ ವಹಿಸಿದ್ದರು. ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ನೆರವೇರಿಸಿ ಮಾತನಾಡಿದರು. ಸಭೆಯಲ್ಲಿ ಜಮಾಅತ್‌ನ ನೂರಾರು ಮಂದಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News