×
Ad

ಆಳ್ವಾಸ್ ವಿದ್ಯಾರ್ಥಿಗಳ 'ಭುವನ್' ಕಾರ್ಯವಿಧಾನ ವೀಕ್ಷಿಸಿದ ಜಿ.ಪಂ. ಸಿ.ಇ.ಓ.

Update: 2017-05-09 23:02 IST

 ಮೂಡುಬಿದಿರೆ, ಮೇ.9 : ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಹಾಗೂ ಇಸ್ರೋ ಮುತುವರ್ಜಿಯಲ್ಲಿ ರೂಪಿಸಲಾಗಿರುವ ‘ಭುವನ್ ಸಾಫ್ಟ್‌ವೇರ್’ಇದರ ಕಾರ್ಯವಿಧಾನವನ್ನು ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಆರ್. ರವಿ ಮಂಗಳವಾರ ಪುತ್ತಿಗೆಯ ಸಂಪಿಗೆಯಲ್ಲಿ ವೀಕ್ಷಿಸಿದರು.

ಪುತ್ತಿಗೆಗ್ರಾಮ ಪಂಚಾಯಿತಿಗಳಲ್ಲಿರುವ ಸಾರ್ವಜನಿಕ ಸೊತ್ತುಗಳ ವಿವರಗಳನ್ನು ಸಂಗ್ರಹಿಸುತ್ತ ‘ಭುವನ್ ಆ್ಯಫ್’ಗೆ ಅಪ್‌ಲೋಡ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಅವರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

 ಮಾಹಿತಿ ಸಂಗ್ರಹಿಸುತ್ತಿದ್ದ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಭಾಕರ್, ಪೂಜಾ, ಮಾರ್ಗದರ್ಶಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಸಂಜಯ್ ಪುತ್ತಿಗೆ ಗ್ರಾ. ಪಂ.ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಸದಸ್ಯರಾದ ನಾಗವರ್ಮ, ನಾಗರಾಜ ಕರ್ಕೇರ,ಗಿರೀಶ್ ಹಂಡೇಲ್ ಉಪಸ್ಥಿತರಿದ್ದರು.

ಪುತ್ತಿಗೆ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಮಾರ್ಶೆಲ್ ಡಿ’ಸೋಜ, ಪಂ.ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಶುಭಾ ಹೆಬ್ಬಾರ್, ಸದಸ್ಯರಾ ನಾಗವರ್ಮ, ನಾಗರಾಜ ಕರ್ಕೇರ, ಗಿರೀಶ್ ಹಂಡೇಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News