ಸಿಬ್ಬಂದಿಯ ಕೊರತೆ: ಬದಿಯಡ್ಕ ಗ್ರಾಪಂ ಸದಸ್ಯರಿಂದ ಧರಣಿ

Update: 2017-05-10 10:36 GMT

ಕಾಸರಗೋಡು, ಮೇ 10: ಬದಿಯಡ್ಕ ಗ್ರಾಮ ಪಂಚಾಯನಲ್ಲಿರುವ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಆಗ್ರಹಿಸಿ ಪಂಚಾಯತ್ ಸದಸ್ಯರು ಬುಧವಾರ ಕಾಸರಗೋಡು ಪಂಚಾಯತ್ ಉಪನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.

ಗ್ರಾಪಂ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಉಪಾಧ್ಯಕ್ಷೆ ಸೈಬುನ್ನೀಸಾ, ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಸದಸ್ಯರಾದ ಡಿ.ಶಂಕರ, ಬಾಲಕೃಷ್ಣ ಶೆಟ್ಟಿ ನೇತೃತ್ವದಲ್ಲಿ ಎಲ್ಲಾ ಪಕ್ಷಗಳಿಗೆ ಸೇರಿದ 19 ಮಂದಿ ಸದಸ್ಯರು ಹಾಗೂ ವಿವಿಧ ಪಕ್ಷಗಳ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಪಂಚಾಯತ್ ಕಾರ್ಯದರ್ಶಿ ದೀರ್ಘ ಕಾಲದಿಂದ ರಜೆಯಲ್ಲಿದ್ದಾರೆ. ಸಹಾಯಕ ಕಾರ್ಯದರ್ಶಿ, ಮುಖ್ಯ ಗುಮಾಸ್ತ, ಲೆಕ್ಕಾಧಿಕಾರಿ, ಇಬ್ಬರು ಎಲಡಿ ಕ್ಲಾಕ್‌ಗಳುಬೇರೆಡೆಗೆ ವರ್ಗಾವಣೆ ಗೊಂಡಿದ್ದಾರೆ. ಕಳೆದ ಎರಡು ತಿಂಗಳಿಂದ ಈ ಸ್ಥಿತಿ ಇದ್ದರೂಇವರ ಬದಲಿ ನೌಕರನ ನೇಮಕಾತಿಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರಿಂದ ಇದೀಗ ಪಂಚಾಯಗೆ ವಿವಿಧ ಅಗತ್ಯಗಳಿಗೆ ಆಗಮಿಸುವ ಸಾರ್ವಜನಿಕರು ಬರಿಗೈಯಲ್ಲಿ ವಾಪಸ್ ಆಗುವ ದುಸ್ಥಿತಿ ಬಂದಿದದೆ. ಅಲ್ಲದೆ ಯಾವುದೇ ಅಭಿವೃದ್ಧಿ ಯೋಜನೆಗಳು ನಡೆಯದೆ ನನೆಗುದಿಗೆ ಬೀಳುವ ಸ್ಥಿತಿ ಉಂಟಾದೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಚಳವಳಿ ಮುಂದುವರಿಸುವುದಾಗಿ ಸದಸ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News