ವಸತಿ ಮದ್ರಸ ಪಬ್ಲಿಕ್ ಪರೀಕ್ಷೆ: ಕೆಜಿಎನ್ ಗೆ 100% ಫಲಿತಾಂಶ

Update: 2017-05-10 10:50 GMT

ಮಾಣಿ, ಮೇ 10: ಅಖಿಲ ಭಾರತ ಸುನ್ನಿ ಶಿಕ್ಷಣ ಮಂಡಳಿಯು ವಸತಿ ಮದ್ರಸಗಳಿಗೆ ಎಪ್ರಿಲ್ ನಲ್ಲಿ ನಡೆಸಿದ 2016-17ನೆ ಸಾಲಿನ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಮಾಣಿ ದಾರುಲ್ ಇರ್ಶಾದ್ ಸಂಸ್ಥೆಯ ಅಧೀನದ ಮಿತ್ತೂರು ಖ್ವಾಜಾ ಗರೀಬ್ ನವಾಝ್(ಕೆಜಿಎನ್) ಬೋರ್ಡಿಂಗ್ ಮದ್ರಸದ ಏಳನೆಯ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ನೂರು ಶೇ. ಫಲಿತಾಂಶ ದಾಖಲಿಸಿದ್ದಾರೆ.

ಕೆಜಿಎನ್ ಮದ್ರಸವು  ಸತತ ಹನ್ನೆರಡು ವರ್ಷಗಳಿಂದ ನೂರು ಶೇಕಡ ಫಲಿತಾಂಶ ದಾಖಲಿಸುತ್ತಾ ಬಂದಿದೆ. 

ಅಖಿಲ ಭಾರತ ಶಿಕ್ಷಣ ಮಂಡಳಿಯು ವಸತಿ ಮದ್ರಸಗಳಿಗಾಗಿ ಪ್ರತ್ಯೇಕ ಪಠ್ಯಕ್ರಮ ಹೊಂದಿದ್ದು; ಶಾಲಾ ಶೈಕ್ಷಣಿಕ ವರ್ಷಗಳಂತೆ ವಾರ್ಷಿಕ ಪರೀಕ್ಷೆ ನಡೆಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News