×
Ad

ಪಾವೂರು ರೋಟರಿ ಸಂಸ್ಥೆಯ ಸನದು ಪ್ರದಾನ

Update: 2017-05-10 18:16 IST

ಮಂಗಳೂರು, ಮೇ 10: ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯ ಪ್ರಾಯೋಜಿಸಿ ನೂತನವಾಗಿ ಪ್ರಾಂರಂಭಿಸಿದ ರೋಟರಿ ಕ್ಲಬ್ ಪಾವೂರಿನ ಸನದು ಪ್ರದಾನ ಸಮಾರಂಭ ಇತ್ತೀಚೆಗೆ ಪಾವೂರಿನ ಶೆಟ್ರ ಬಾಳಿಕೆ ಮನೆ ಪ್ರಾಂಗಣದಲ್ಲಿ ನಡೆಯಿತು.

ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರೋ.ಅನಿಲ್ ಗೋನ್ಸಲ್‌ವೀಸ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ 3181ರ ಗವರ್ನರ್ ರೋ.ಡಾ.ಆರ್.ಎಸ್.ನಾಗಾರ್ಜುನ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರೋ.ಪ್ರಭಾಕರ ಶೆಟ್ಟಿ, ರೋಟರಿ ಮಾಜಿ ಜಿಲ್ಲಾ ಗವರ್ನರ್ ರೋ.ಡಾ.ದೇವದಾಸ್ ರೈ ಉಪಸ್ಥಿತರಿದ್ದರು. ಸಹಾಯಕ ಗವರ್ನರ್ ರೋ.ವಿಕ್ರಂ ದತ್ತ ರೋಟರಿ ಸಂಸ್ಥೆಯ ಸಾಪ್ತಾಹಿಕ ಪತ್ರಿಕೆ ‘ಸೆಂಟೋರ್’ನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ರೋಟರಿ ಸದಸ್ಯತ್ವ ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಶೇಖರ ಶೆಟ್ಟಿ, ರೋಟರಿ ಜಿಲ್ಲಾ ವಿಸ್ತರಣಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಕಾರಂತ್, ವಲಯ ಸೇನಾನಿ ಇಲಾಯಸ್ ಸಾಂಗ್ಟಿನ್, ರೋ. ರಾಜಗೋಪಾಲ್ ರೈ, ರೇಮಂಡ್ ಡಿ.ಕುನ್ಹ, ವಿವೇಕ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News