×
Ad

ಜ್ಞಾನದೇವ ಕಾಮತ್‌ಗೆ ಪ್ರಶಸ್ತಿ

Update: 2017-05-10 18:30 IST

ಹೆಬ್ರಿ, ಮೇ 10: ಗ್ರಾಮೀಣ ಪ್ರದೇಶದಲ್ಲಿ 55 ವರ್ಷಗಳಿಂದ ನಿಸ್ವಾರ್ಥ ವಾಗಿ ನಡೆಸುತ್ತಿರುವ ಸಮಾಜಸೇವೆಗಾಗಿ ಬಹುಮುಖ ಪ್ರತಿಭೆಯ ಸಾಹಿತಿ ಆರ್ಬೆಟ್ಟು ಜ್ಞಾನದೇವ ಕಾಮತ್‌ರಿಗೆ ರಾಷ್ಟ್ರ ಮಟ್ಟದ ಭಾರತ ಗೌರವ ಪ್ರಶಸ್ತಿ ಲಭಿಸಿದೆ.

ಸ್ನೇಹ ಸಾಂಸ್ಕೃತಿಕ ಸಂಘ ಬೆಂಗಳೂರು ಮತ್ತು ಜನಕಪುರಿ ಕನ್ನಡ ಕೂಟ ದೆಹಲಿ ಇವರ ಸಹಯೋಗದಲ್ಲಿ ಮೇ 11ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯುವ ಕನ್ನಡ ನಾಡುನುಡಿ ಸಂಸ್ಕೃತಿ ಉತ್ಸವದಲ್ಲಿ ರಾಜ್ಯಸಭಾ ಸದಸ್ಯರಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಮತ್ತು ರಾಯಚೂರು ಸಂಸದ ಬಿ.ವಿ ನಾಯಕ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಅರ್ಬೆಟ್ಟು ಜ್ಞಾನದೇವ ಕಾಮತರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಸೇರಿ ಹಲವು ಪ್ರಶಸ್ತಿ, ಗೌರವಗಳು ಈಗಾಗಲೇ ಸಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News