ಡಾ.ವಿಶ್ವನಾಥ ನಾಯಕ್‌ರಿಗೆ ಆಯುರ್ವೇದಿಕ್ ವೈದ್ಯರತ್ನ ಪ್ರಶಸ್ತಿ
Update: 2017-05-10 18:46 IST
ಉಡುಪಿ, ಮೇ 10: ಪಾಣೆಮಂಗಳೂರಿನ ಆಯುರ್ವೆದಿಕ್ ವೈದ್ಯ ಡಾ. ವಿಶ್ವನಾಥ ನಾಯಕ್ ಅವರು ವೈದ್ಯಕೀಯ ಕ್ಷೇತ್ರದ ವಿಶೇಷ ಸಾಧನೆಗೆ ರಾಷ್ಟ್ರಮಟ್ಟದ ಆಯುರ್ವೇದಿಕ್ ವೈದ್ಯರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರು ಸ್ನೇಹ ಯುವ ಸಾಂಸ್ಕೃತಿಕ ಸಂಘದ ವತಿಯಿಂದ ದೆಹಲಿಯಲ್ಲಿ ಮೇ 11ರಂದು ನಡೆಯುವ ಕನ್ನಡ ನಾಡು ನುಡಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ರಂಜಿತ್ ತಿಳಿಸಿದ್ದಾರೆ.