×
Ad

ಅಕ್ರಮ ಮರಳು ಸಾಗಾಟ ಲಾರಿ ವಶಕ್ಕೆ

Update: 2017-05-10 18:53 IST

ಮಂಜೇಶ್ವರ,ಮೇ 10 : ಐಲ ಸಮೀಪದ ಸಮುದ್ರ ತೀರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಮಂಗಳವಾರ ರಾತ್ರಿ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಂಬಳೆ ಸಿ.ಐ ಮನೋಜ್‌ಕುಮಾರ್ ಅವರ ಆದೇಶದಂತೆ ಪೋಲಿಸ್ ಬಸ್ ಚಾಲಕ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಓವರ್‌ಟೇಕ್ ಮಾಡಿ ಅಡ್ಡ ಹಾಕುವಲ್ಲಿ ಯಶಸ್ವಿಯಾಗಿದ್ದರೂ, ಚಾಲಕ ಲಾರಿಯನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾನೆ. ಆದರೆ ಇದೀಗ ವಾಹನವನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News