ಮೇ 11ರಿಂದ ಖುವ್ವತುಲ್ ಇಸ್ಲಾಂ ಅರಬಿಕ್ ಕಾಲೇಜಿನ ನೂರನೆ ವಾರ್ಷಿಕ, ಸನದುದಾನ ಸಮ್ಮೇಳನ
ತಳಿಪ್ಪರಂಬ, ಮೇ 10: ತಳಿಪ್ಪರಂಬ ಜಾಮಿಅ ಖುವ್ವತುಲ್ ಇಸ್ಲಾಂ ಅಲ್ ಅರಬಿಯ್ಯ ಕಾಲೇಜಿನ ಶತವಾರ್ಶಿಕ ಮತ್ತು ಸನದುದಾನ ಸಮ್ಮೇಳನ ಮೇ 11,12 ಮತ್ತು 13ರಂದು ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ.
ಶಂಸುಲ್ ಉಲಮಾ, ಮಡವೂರು ಶೈಖ್, ಕೂಟಿಲಙಾಡಿ ಬಾಪು ಮುಸ್ಲಿಯಾರ್, ಉಳ್ಳಾಲ ತಂಙಲ್ ಮುಂತಾದವರು ವಿದ್ಯಾಭ್ಯಾಸ ಪಡೆದ ಮತ್ತು ಕೇರಳದ ಮೊದಲ ದೀನೀ ಕೇಂದ್ರ ಎಂದು ಪ್ರಖ್ಯಾತಿ ಹೊಂದಿದ ಕಾಲೇಜು ಇದೀಗ ನೂರನೆ ವರ್ಷ ಪೂರ್ತಿಗೊಳಿಸಿ ಧಾರ್ಮಿಕ ಮತ್ತು ಭೌತಿಕ ಶಿಕ್ಷಣವನ್ನು ಸಮಾಜಕ್ಕೆ ನೀಡುತ್ತಿದೆ. ಸಮ್ಮೇಳನ ಪ್ರಯುಕ್ತ ಮಜ್ಲಿಸುನ್ನೂರು, ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ, ಬುರ್ಧಾ ಮಜ್ಲಿಸ್, ಸ್ವಹೀಹ್ ಬುಖಾರಿ ಖತ್ತಂ ದುವಾ, ಅಝ್ಹರಿ ಸಂಗಮ, ಉಲಮಾ ಉಮರಾ ಸಂಗಮ, ಪ್ರವಾಸಿ ಸಂಗಮ ಮತ್ತು ಸನದುದಾನ ನಡೆಯಲಿದೆ.
ಮೇ 13ರಂದು ಸಮಾರೋಪ ಸಮಾರಂಭವು ನಡೆಯಲಿದ್ದು ಪಾಣಕ್ಕಾಡ್ ಸೈಯದ್ ಅಬ್ಬಾಸಲಿ ಶಿಹಾಬ್ ತಂಙಳ್, ಸಮಸ್ತ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್, ಸಮಸ್ತ ನಾಯಕರಾದ ಎಮ್ ಟಿ ಅಬ್ದುಲ್ಲಾ ಮುಸ್ಲಿಯಾರ್, ಪಿ ಕೆ ಪಿ ಅಬ್ದುಸ್ಸಲಾಂ ಮುಸ್ಲಿಯಾರ್, ಪಿ ಪಿ ಉಮರ್ ಮುಸ್ಲಿಯಾರ್, ಮಾಣಿಯೂರು ಅಹ್ಮದ್ ಮುಸ್ಲಿಯಾರ್, ಬ್ಳಾತೂರು ಅಬ್ದುರ್ರಹ್ಮಾನ್ ಹೈತಮಿ, ನಾಸರ್ ಫೈಝಿ ಕೂಡತ್ತಾಯಿ ಮತ್ತು ವಿವಿಧ ರಾಜಕೀಯ, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದ ಕ ಜಿಲ್ಲಾ ಅಝ್ಹರೀಸ್ ಅಸೋಷಿಯೇಸನ್ ಕರೆ ನೀಡಿದೆ ಎಂದು ನಝೀರ್ ಅಝ್ಹರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.