ರಿಕ್ಷಾಕ್ಕೆ ಲಾರಿ ಢಿಕ್ಕಿ: ಓರ್ವ ಸಾವು
Update: 2017-05-10 19:49 IST
ಪಡುಬಿದ್ರಿ,ಮೇ 10 : ಲಾರಿಯೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಪ್ರಯಾಣಿಕ ಮೃತಪಟ್ಟ ಘಟನೆ ಪಡುಬಿದ್ರಿಯ ಬೀಡು ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತರನ್ನು ಮಂಗಳೂರು ನಿವಾಸಿ ಮಾಧವ (30) ಎಂದು ಗುರುತಿಸಲಾಗಿದೆ. ಮುಲ್ಕಿಯ ಏಳಿಂಜೆಯ ಸಂಬಂಧಿಕರೊಂದಿಗೆ ಉಚ್ಚಿಲದಲ್ಲಿ ನಡೆಯುತಿದ್ದ ಕಾರ್ಯಕ್ರಮಕ್ಕೆ ತೆರಳಿ ವಾಪಾಸು ಮೂಲ್ಕಿ ಕಡೆಗೆ ರಿಕ್ಷಾದಲ್ಲಿ ಪ್ರಯಾಣಿಸುತಿದ್ದರು. ಈ ವೇಳೆ ಮಂಗಳೂರು ಕಡೆಯಿಂದ ಬಂದ ಲಾರಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ತೀವ್ರಗಾಯಗೊಂಡ ಮಾದವ ಸ್ಥಳದಲ್ಲೇ ಮೃತಪಟ್ಟರು. ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.