ಕಾಲೇಜು ಪ್ರವೇಶಾತಿ: ಅರ್ಜಿ ಆಹ್ವಾನ
ಮಂಗಳೂರು, ಮೇ 10: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅರ್ಹ ವಿದ್ಯಾರ್ಥಿಗಳಿಂದ 2017-18ನೆ ಸಾಲಿನ ಪ್ರಥಮ ವರ್ಷದ ಪದವಿ ತರಗತಿಗಳಿಗೆ ಸೇರ್ಪಡೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಕೋರ್ಸ್‌ಗಳು
ಬಿ.ಎ,ಬಿಕಾಂ ಮತ್ತು ಬಿಎಸ್ಸಿ ಪದವಿಗೆ ಅರ್ಜಿ ಸಲ್ಲಿಸಬಹುದು. ಬಿ.ಎ. ಪದವಿ ವಿಷಯಗಳು : (18 ಸಂಯೋಜನೆಗಳಲ್ಲಿ ಆಯ್ಕೆಗೆ ಅವಕಾಶ): ಇತಿಹಾಸ, ಅರ್ಥಶಾಸ್ತ್ರ. ರಾಜಕೀಯ ಶಾಸ್ತ್ರ, ಭೂಗೋಳ ಶಾಸ್ತ್ರ, ಸಮಾಜ ಶಾಸ್ತ್ರ, ಪತ್ರಿಕೋದ್ಯಮ, ಪ್ರವಾಸೋದ್ಯಮ, ಭರತನಾಟ್ಯ, ಕನ್ನಡ (ಐಚ್ಛಿಕ), ಇಂಗ್ಲಿಷ್ (ಐಚ್ಛಿಕ) ಮತ್ತು ಹಿಂದಿ (ಐಚ್ಛಿಕ) ಬಿ.ಎಸ್ಸಿ ಪದವಿ ವಿಷಯಗಳು (6 ಸಂಯೋಜನೆಗಳಲ್ಲಿ ಆಯ್ಕೆಗೆ ಅವಕಾಶ) : ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮಾಣುಶಾಸ್ತ್ರ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು ರೂ. 200 ಮತ್ತು ಪರಿಶಿಷ್ಟ ಜಾತಿ/ ಪಂಗಡ ಹಾಗೂ ವರ್ಗ-1 ರ ಅಭ್ಯರ್ಥಿಗಳು ರೂ. 100 (ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು) ಚಲನ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಂಗಳೂರು, ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜನತಾ ಬಝಾರ್ ಕಟ್ಟಡ, ಮಂಗಳೂರು ಇಲ್ಲಿ ವಿಶ್ವವಿದ್ಯಾನಿಲಯ ನಿಧಿಗೆ ಪಾವತಿಸಿ ಕಾಲೇಜು ಕಚೇರಿಯಲ್ಲಿ ಚಲನ್‌ನ್ನು ಹಾಜರುಪಡಿಸಿ ಅರ್ಜಿ ಫಾರಂ ಪಡೆಯಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 22. ವಿಶ್ವವಿದ್ಯಾನಿಲಯ, ಸರಕಾರದ ನಿಯಮಾವಳಿಗಳ ಪ್ರಕಾರ ಪ್ರವೇಶವನ್ನು ನೀಡಲಾಗುತ್ತದೆ ಎಂದು ಪ್ರಾಂಶುಪಾಲರ ಪ್ರಕಟನೆ ತಿಳಿಸಿದೆ.