×
Ad

ಜಿಂಕೆ ಮಾಂಸ ಸೇವನೆಗೆ ಯತ್ನದ ಆರೋಪ: ಓರ್ವ ಸೆರೆ

Update: 2017-05-10 20:46 IST

ಮುಂಡಗೋಡ, ಮೇ 10: ಸನವಳ್ಳಿ ಗ್ರಾಮದಲ್ಲಿ ಜಿಂಕೆಯೊಂದನ್ನು ಕೊಂದು ಅದರ ಮಾಂಸ ಬೇಯಿಸುತ್ತಿದ್ದರು ಎನ್ನಲಾಗಿದ್ದು, ಈ  ಸಂದರ್ಭ ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೇಯಿಸಿದ ಮಾಂಸ ಸಹಿತ ಓರ್ವನನ್ನು ಬಂಧಿಸಿದ್ದು ಈ ಸಂದರ್ಭ 9 ಮಂದಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

 ಸನವಳ್ಳಿ ಗ್ರಾಮದ ಪ್ರಭು ಗಣಪತಿ ಅರಿಶೀನಗೇರಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಗಣಪತಿ ಶಿಂಗನಳ್ಳಿ, ಮಂಜುನಾಥ ಹಿರೇಕಣಿಗಿ, ಮುನೇಶ ಕಾಶಿಬಾಯಿ, ರಾಜು ಕೆರೆಹೊಲದವರ, ಉಮೇಶ ಕೆರೆಹೊಲದವರ, ಸುರೇಶ ಹನುಮನ್ನವರ, ಬಸವರಾಜ ಭಜಂತ್ರಿ, ತಿರಕಪ್ಪ ಸುಣಗಾರ, ರಮೇಶ ಕೆರೆಹೊಲದವರ ಪರಾರಿಯಾದ ಆರೋಪಿಗಳು ಎಂದು ಗುರುತಿಸಲಾಗಿದೆ.
  ಉಪವಲಯ ಅರಣ್ಯಾಧಿಕಾರಿಗಳಾದ  ಡಿ.ಬಿ. ಪಠಾಣ, ಬಸವರಾಜ ಪೂಜಾರ, ಶ್ರೀಕಾಂತ ವೇರ್ಣೆಕರ, ಗಿರೀಶ, ಶ್ರೀಕಾಂತ ಕೊಳ್ಳಕರ ಮತ್ತು ಸಿಬ್ಬಂದಿ ಹಸನ ನತಾಪ್, ಚನ್ನಪ್ಪ ಕುಂಬಾರ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News