ತೋಡಾರು: ಯೆನೆಪೊಯ ತಾಂತ್ರಿಕ ಕಾಲೇಜಿನಲ್ಲಿ ಕಾರ್ಯಾಗಾರ
Update: 2017-05-10 21:05 IST
ಮೂಡುಬಿದಿರೆ, ಮೇ 10: ತೋಡಾರಿನ ಯೆನೆಪೊಯ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ವತಿಯಿಂದ "ಫಂಡಾ ಮೆಂಟಲ್ಡ್ ಆಪ್ ಕಂಪ್ಯೂಟರ್ ನೆಟ್‌ವರ್ಕ್ಸ್ ಮತ್ತು ಆಪರೇಟಿಂಗ್ ಸಿಸ್ಟಮ್" ಎಂಬ ವಿಷಯದ ಕುರಿತು ಎರಡು ದಿನ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಜಿ.ಡಿಸೋಜಾ ಕಾರ್ಯಾಗಾರವನ್ನು ಉದ್ಘಾಟಿಸಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ಮಾಹಿತಿ ನೀಡಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಭರತೇಶ್ ಹಾಗೂ ಐಟಿ ವಿಭಾಗದ ರೋಹಿತ್ ಮತ್ತು ಅರುಣ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಂಪ್ಯೂಟರ್ ನೆಟ್‌ವರ್ಕ್ಸ್ ಮತ್ತು ಆಪರೇಟಿಂಗ್ ಸಿಸ್ಟಮ್ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿನಿಯರಾದ ವಿದ್ಯಾಶ್ರೀ ಹಾಗೂ ಪೂಜಾ ಕಾರ್ಯಕ್ರಮ ನಿರೂಪಿಸಿದರು.