ಕೇರಳದಲ್ಲಿ ಅಪಘಾತ: ಧರ್ಮಸ್ಥಳದ ಮಹಿಳೆ ಮೃತ್ಯು, ಇಬ್ಬರಿಗೆ ಗಾಯ
Update: 2017-05-10 21:25 IST
ಬೆಳ್ತಂಗಡಿ, ಮೇ 10: ಕೇರಳದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಧರ್ಮಸ್ಥಳ ಸಮೀಪದ ಕಾಯರ್ತಡ್ಕ ಎಂಬಲ್ಲಿನ ನಿವಾಸಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ. ಮೃತ ಮಹಿಳೆ ಸ್ಥಳೀಯ ನಿವಾಸಿ ನಿವೃತ್ತ ಸೈನಿಕ ಮ್ಯಾಥ್ಯೂ ಎಂಬವರ ಪತ್ನಿ ಆಲೀಸ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.
ಇವರು ಕುಟುಂಬ ಸಮೇತ ಕೇರಳದ ಚರ್ಚ್‌ಗಳಿಗೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಮಂಗಳವಾರ ಕೇರಳದ ಪಯ್ಯನ್ನೂರಿನ ಸಮೀಪ ಲಾರಿಯೊಂದು ಇವರ ಕಾರಿಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಆಲೀಸ್ ಮ್ಯಾಥ್ಯೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮ್ಯಾಥ್ಯೂ ಅವರ ಮಗಳು ಮೇರಿ ಹಾಗೂ ಕಾರಿನಲ್ಲಿದ್ದ ಶಾಜಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.