ಎಪಿಡಿ ಫೌಂಡೇಶನ್ ಉಸಿರಾಟ ಕ್ರಿಯೆಯ ಪರೀಕ್ಷೆ - ಹಂತ 2
ಮಂಗಳೂರು, ಮೇ 10: ಟ್ರಾಫಿಕ್ ಪೋಲಿಸರ ಉಸಿರಾಟ ಕ್ರಿಯೆಯ ಪರೀಕ್ಷೆ (ಪಿಎಫ್‌ಟಿ) ಸಂಘಟಿಸಿದ ನಂತರ, ಆ್ಯಂಟಿ ಪೊಲ್ಯೂಶನ್ ಡ್ರೈವ್ (ಎಪಿಡಿ) ಫೌಂಡೇಶನ್ ನಗರದ ಆಟೋ ರಿಕ್ಷಾ ಚಾಲಕರ ಮೇಲೆ ವಾಯು ಮಾಲಿನ್ಯದ ಪರಿಣಾಮವನ್ನು ಅಳೆಯಲು ಹಂತ-2ನ್ನು ಪ್ರಾರಂಭಿಸಿದೆ. ಈ ಯೋಜನೆಯನ್ನು ಎಪಿಡಿ ಫೌಂಡೇಶನ್‌ನಲ್ಲಿ ಶಿಷ್ಯವೃತ್ತಿಯನ್ನು ಪಡೆಯುತ್ತಿರುವ ಬೆಂಗಳೂರಿನ ಐಎಫ್‌ಐಎಮ್‌ನ ವಿದ್ಯಾರ್ಥಿ ವೃಂದದವರೊಂದಿಗೆ ಕಳೆದ ವಾರ ಪ್ರಾರಂಭಿಸಲಾಯಿತು. ಸುಮಾರು 500 ರಿಕ್ಷಾ ಚಾಲಕರುಗಳ ಗುರಿಯನ್ನು ಹೊಂದಿದ್ದು, ಅದರ ಪೈಕಿ 250 ಚಾಲಕರನ್ನು ಈಗಾಗಲೇ ತಪಾಸಣೆ ಮಾಡಲಾಗಿದೆ ಮತ್ತು ಅವರ ವಯಸ್ಸು, ಸೇವೆಯ ವರ್ಷಗಳು, ಧೂಮಪಾನಿಗಳು / ಧೂಮಪಾನಿಗಳಲ್ಲದವರು, ಅಸ್ತಮಾ, ತೂಕದಂತಹ ಡೇಟಾವನ್ನು ಸಂಗ್ರಹಣೆ ಮಾಡಲಾಯಿತು.
ಫಾ. ಮುಲ್ಲರ್ಸ್‌ನ ಉಸಿರಾಟ ತಜ್ಞರಾಗಿರುವ ಡಾ. ಡಾನ್ ಗ್ರೆಗೋರಿಯವರ ಮಾರ್ಗದರ್ಶನದಲ್ಲಿ ಇದನ್ನು ಸಂಘಟಿಸಲಾಯಿತು, ರಿಕ್ಷಾ ಚಾಲಕರು ಹೊರಗಡೆ ಕೆಲಸ ಮಾಡುವವರರಾಗಿದ್ದು ಇವರು ನಿರಂತರವಾಗಿ ವಾಯು ಮಾಲಿನ್ಯಕ್ಕೆ ಮತ್ತು ಅದರ ಮಾರಣಾಂತಿಕ ಕಾಯಿಲೆಗಳಿಗೆ ಒಡ್ಡಿಕೊಳ್ಳುತ್ತಾರೆ. ಲ್ಯೂಪಿನ್ ಫಾರ್ಮಾಸಿಯುಟಿಕಲ್ಸ್‌ನ ಸುಜಿತ್ ಕುಮಾರ್‌ರವರು ಸ್ಪಿರೋಮೀಟರ್‌ನೊಂದಿಗೆ ಡೇಟಾವನ್ನು ಸಂಗ್ರಹ ಮಾಡಿದ್ದಾರೆ. ಈ ಅಧ್ಯಯನವು ನಮಗೆ ಭಷ್ಯದಲ್ಲಿ ಮಂಗಳೂರು ನಗರದ ಮೇಲೆ ವಾಯು ಮಾಲಿನ್ಯದ ಪರಿಣಾಮವನ್ನು ಮೌಲ್ಯಮಾಪನ ಮಾಡುಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಎಪಿಡಿ ಫೌಂಡೇಶನ್‌ನ ಸಂಸ್ಥಾಪಕ ಅಬ್ದುಲ್ಲಾ ಎ. ರಹ್ಮಾನ್.
ವಾಯು ಮಾಲಿನ್ಯವು ದೇಶದಲ್ಲಿ ಬೃಹತ್ತಾಗಿ ಬೆಳೆಯುತ್ತಿರುವ ಸಮಸ್ಯೆಯಾಗಿದೆ. ನಮ್ಮ ಪರಿಸರ ಮತ್ತು ಅದರ ಜನತೆಯ ಮೇಲೆ ಆದ ಪರಿಣಾಮವನ್ನು ತೋರಿಸುವ ಯಾವುದೇ ಡೇಟಾ ಲಭ್ಯವಿಲ್ಲದೇ ಇರುವುದು ಕಳಕಳಿಗೆ ಕಾರಣವಾಗಿದೆ. ನಮ್ಮ ಡೇಟಾ ಮತ್ತು ಅಂಕಿ-ಅಂಶಗಳು ವ್ಯವಸ್ಥೆಯಲ್ಲಿನ ಕೊರತೆಯನ್ನು ನೀಗಿಸಬಹುದು. ನಗರದ ಮೇಲೆ ವಾಯು ಮಾಲಿನ್ಯ ಮತ್ತು ಅದರ ಏರುಗತಿಯ ಪರಿಣಾಮಗಳನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.