‘ಈ ಹುಲಿ ಮಾಸ್ಕ್ ನನ್ನ ಮೊದಲ ಆಟಿಕೆ’ : ಶಕೀಲ್

Update: 2017-05-11 07:28 GMT

ನನಗೆ ಕ್ರಿಕೆಟ್ ಆಡುವುದೆಂದರೆ ಬಹಳ ಇಷ್ಟ. ಆದರೆ ಅಭ್ಯಾಸ ಮಾಡಲು ನನಗೆ ಸಮಯವೇ ಇಲ್ಲ. ಪ್ರತಿ ದಿನ ನಮಗೆ ಫ್ಯಾಕ್ಟರಿಯಲ್ಲಿ ಹತ್ತು ಗಂಟೆಗಳ ಕಾಲ ಕೆಲಸ ಮಾಡಬೇಕಿದೆ. ಆದರೆ ಕೆಲವೊಮ್ಮೆ ಒಂದು ಗಂಟೆ ಕಾಲ ವಿದ್ಯುತ್ ಕೈಕೊಟ್ಟಾಗ ನಮಗೆ ಆಟವಾಡಲು ಸ್ವಲ್ಪ ಸಮಯ ದೊರೆಯುತ್ತದೆ.

ಸಾಮಾನ್ಯವಾಗಿ ನಾನು ಹತ್ತಿರದ ಗದ್ದೆಗೆ ಹೋಗುತ್ತೇನೆ. ಅಲ್ಲಿ ಶಾಲೆಗೆ ಹೋಗುವ ಹುಡುಗರು ಅವರೊಡನೆ ನನ್ನನ್ನು ಆಟಕ್ಕೆ ತೆಗೆದುಕೊಳ್ಳುತ್ತಾರೆ. ಕರೆಂಟ್ ಬರುವ ತನಕ ನಾನು ಆಟವಾಡುತ್ತೇನೆ. ನನ್ನೊಡನೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಇತರ ಮಕ್ಕಳು ಈ ಸಮಯದಲ್ಲಿ ವಿರಮಿಸುತ್ತಾರಾದರೆ, ನಾನು ಹಾಗಲ್ಲ. ನನ್ನ ಕ್ರಿಕೆಟ್ ಪ್ರೇಮದಿಂದಾಗಿ ನನ್ನ ಫ್ಯಾಕ್ಟರಿ ಮಾಲಕನಿಗೆ ಕಿರಿಕಿರಿಯಾಗಿತ್ತು.

‘‘ನಾನು ದೊಡ್ಡವನಾದ ಮೇಲೆ ಕ್ರಿಕೆಟ್ ಆಡುತ್ತೇನೆ,’’ ಎಂದು ನಾನು ಅವರಿಗೆ ಯಾವತ್ತೂ ಹೇಳುತ್ತಿದ್ದೆ. ಆಗ ಅವರು ನಕ್ಕು ಇಷ್ಟು ದೊಡ್ಡ ಕನಸು ಕಾಣಲು ನಾನು ತುಂಬಾ ಚಿಕ್ಕವನೆಂದು ಹೇಳುತ್ತಿದ್ದರು. ಆದರೆ ಪ್ರತಿ ಬಾರಿ ವಿದ್ಯುತ್ ಕೈಕೊಟ್ಟಾಗಲೂ ನಾನು ಕ್ರಿಕೆಟ್ ಪ್ರಾಕ್ಟೀಸ್ ಮುಂದುವರಿಸಿದ್ದೆ.

ಕಳೆದ ಶುಕ್ರವಾರ ಮೈದಾನವೊಂದರಲ್ಲಿ ಪಂದ್ಯವೊಂದಿತ್ತು. ನನ್ನ ತಂಡವನ್ನು ನಾನು ಮುನ್ನಡೆಸುತ್ತಿದ್ದೆ. ನಮ್ಮ ಫ್ಯಾಕ್ಟರಿ ಮಾಲಕ ನಾವು ಆಡುತ್ತಿದ್ದುದನ್ನು ಗಮನಿಸುತ್ತಿದ್ದರು. ಆಶ್ಚರ್ಯಕರವಾಗಿ ನಾನು ಓಡುತ್ತಿರುವಾಗ ಅವರು ನನ್ನನ್ನು ಹುರಿದುಂಬಿಸುತ್ತಿದ್ದರು ಹಾಗೂ ಹಲವು ಬಾರಿ ನಾನೊಬ್ಬ ಹುಲಿಯಂತಹ ಹುಡುಗ ಎನ್ನುತ್ತಿದ್ದರು. ನಾವು ಪಂದ್ಯ ಗೆದ್ದೆವು. ಈ ಹುಲಿ ಮುಖವಾಡವನ್ನು ನನ್ನ ಫ್ಯಾಕ್ಟರಿ ಮಾಲಕ ನನಗೆ ಉಡುಗೊರೆಯಾಗಿ ನೀಡಿದ್ದರು. ಇದು ನನ್ನ ಜೀವನದ ಮೊದಲ ಆಟಿಕೆ !

-ಶಕೀಲ್

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News