ಅಡ್ಡೂರಿನಲ್ಲಿ "ನಂಡೆ ಪೆಂಙಳ್" ಕಾರ್ಯಕ್ರಮ
ಅಡ್ಡೂರು, ಮೇ 11: ಬದ್ರಿಯಾ ಜುಮಾ ಮಸೀದಿ ಅಡ್ಡೂರು ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ "ನಂಡೆ ಪೆಂಙಳ್" ಜಾಗೃತಿ ಕಾರ್ಯಕ್ರಮವು ಅಲ್ ಮದ್ರಸತುಲ್ ಬದ್ರಿಯಾ ಇಲ್ಲಿ ಇತ್ತೀಚಿಗೆ ಜರಗಿತು.
"ನಂಡೆ ಪೆಂಙಳ್" ಅಭಿಯಾನದ ಗೌರವಾಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ ಅಲ್ ಮುಝೈನ್ ಅಭಿಯಾನದ ಬ್ರೋಷರನ್ನು ಅಡ್ಡೂರು ಮಸೀದಿಯ ಅಧ್ಯಕ್ಷ ಟಿ.ಸೈಯದ್ ತೋಕೂರು ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸೂರಲ್ಪಾಡಿ ಮಸೀದಿಯ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿ ಪಿ.ಎ. ಇಸಾಖ್, ಸಲಹೆಗಾರ ಎ.ಎಸ್. ಬಾವುಂಞಿ ಹಾಜಿ, ಟಿ.ಆರ್.ಎಫ್. ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಫತೇ ಮುಹಮ್ಮದ್ ಪುತ್ತಿಗೆ, ಇಂಜಿನಿಯರ್ ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.
"ನಂಡೆ ಪೆಂಙಳ್" ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ರಫೀಕ್ ಮಾಸ್ಟರ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಿದರು. ಅಡ್ಡೂರು ಮಸೀದಿಯ ಮುಹಮ್ಮದ್ ಮುಸ್ಲಿಯಾರ್ ದುಅ ನೆರವೇರಿಸಿದರು. ಟಿ.ಆರ್.ಎಫ್. ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಟಿ.ಆರ್.ಎಫ್. ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಆರ್.ಎಫ್. ಸದಸ್ಯ ಹುಸೈನ್ ಬಡಿಲ ವಂದಿಸಿದರು. ಟಿ.ಆರ್.ಎಫ್. ಸದಸ್ಯ ಅಸ್ಲಂ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು. ಅಡ್ಡೂರು ವಲಯ "ನಂಡೆ ಪೆಂಙಳ್" ಸಮಿತಿಯನ್ನು ರಚಿಸಲಾಯಿತು.