ಹಾಂಕಾಂಗ್‌ನಲ್ಲಿ ‘ಆ್ಯಷ್ಕೋ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’ ಶುಭಾರಂಭ
ಪುತ್ತೂರು, ಮೇ 11: ಅನಿವಾಸಿ ಉದ್ಯಮಿ ಡಾ. ಅಶ್ರಫ್ ಎಸ್. ಕಮ್ಮಾಡಿ ಅವರ ನೂತನ ಕಂಪೆನಿ ‘ಆ್ಯಷ್ಕೋ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’ ಹಾಂಕಾಂಗ್‌ನ ಕೊವ್ಲೆಮ್ ಸಿಮ್ ಷಾ ಸುಲ್ ಈಸ್ಟ್‌ನ ವಿಂಗ್ ಆನ್ ಫ್ಲಾಝಾದಲ್ಲಿ ಮೇ 10 ರಂದು ಶುಭಾರಂಭಗೊಂಡಿದೆ.
ಕೆ.ಸಿ.ಪಿ. ಬಿಸಿನೆಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ಅಗೇಲ ಲೀ ಅವರು ನೂತನ ಕಂಪೆನಿಯ ‘ಗ್ರೀನ್ ಬಾಕ್ಸ್’ನ್ನು ಆ್ಯಷ್ಕೋ ಇನ್ವೆಸ್ಟ್‌ಮೆಂಟ್ ಲಿ. ಕಂಪೆನಿಯ ಚೆಯರ್‌ಮ್ಯಾನ್ ಆಗಿರುವ ಡಾ. ಅಶ್ರಫ್ ಎಸ್.ಕಮ್ಮಾಡಿ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿ ಶುಭಹಾರೈಸಿದರು. ಕೆಸಿಪಿ ಬಿಸಿನೆಸ್ ಸೆಂಟರ್‌ನ ಸುಯಿ ಚೋಯಿರವರು ಆಗಮಿಸಿ ಶುಭಹಾರೈಸಿದರು.
ಡಾ. ಅಶ್ರಫ್ ಎಸ್. ಕಮ್ಮಾಡಿ ಈಗಾಗಲೇ ಕಿಂಗ್‌ಡಮ್ ಆಫ್ ಬಹರೈನ್‌ನ ಮನಮಾ ಹೂರಾದಲ್ಲಿ ಆ್ಯಷ್ಕೋ ಬಿಸಿನೆಸ್ ಯೂನಿಯನ್ ಕಂಪೆನಿ ಮತ್ತು ಆ್ಯಷ್ಕೋ ಕನ್‌ಸ್ಟ್ರಕ್ಷನ್ ಕಂಪೆನಿಗಳನ್ನು ಮುನ್ನೆಡೆಸುತ್ತಿದ್ದು, ಇದೀಗ ಹಾಂಕಾಂಗ್‌ನಲ್ಲಿ ಆ್ಯಷ್ಕೋ ಹೆಸರಿನಲ್ಲಿ ಬೇಸ್ ಮೆಟಲ್, ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನೊಳಗೊಂಡ ‘ಆ್ಯಷ್ಕೋ ಇನ್ವೆಸ್ಟ್‌ಮೆಂಟ್ ಲಿಮಿಟೆಡ್’ ವ್ಯವಹಾರ ಉದ್ಯಮವನ್ನು ಪರಿಚಯಿಸುತ್ತಿದ್ದಾರೆ. ನೂತನ ಕಂಪೆನಿಯ ನಿರ್ದೇಶಕರಾದ ಆಶ್ಮೀರ್ ಕಮ್ಮಾಡಿ ಸ್ವಾಗತಿಸಿ, ಆಶಿಶ್ ಕಮ್ಮಾಡಿ ವಂದಿಸಿದರು.