ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್: ಪ್ರೊಲಾಝ್ ಕ್ಯಾಂಪ್
ಉಳ್ಳಾಲ, ಮೇ 11: ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಪೇಟೆಯ ಪುರಸಭೆ ಸಮುದಾಯ ಭವನದಲ್ಲಿ ಇತ್ತೀಚೆಗೆ ಪ್ರೊಲಾಝ್ ಕ್ಯಾಂಪ್ ನಡೆಯಿತು.
ಸೆಕ್ಟರ್ ಅಧ್ಯಕ್ಷ ಸೈಯದ್ ಖುಬೈಬ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಕೆ ಸಿ ಎಫ್ ಅಲ್ ಐನ್ ಸೆಕ್ಟರ್ ದುಬೈ ಅಸ್ಸುಫ್ಫ ಕನ್ವೀನರ್ ಹಾಫಿಝ್ ಸಫ್ವಾನ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಮುಸ್ಲಿಮನ ಕಾರ್ಯ ಚಟುವಟಿಕೆಯಲ್ಲಿ ಇಖ್ಲಾಸ್ ಇರಬೇಕು. ಇಖ್ಲಾಸ್ ಇಲ್ಲದ ಕಾರ್ಯ ಚಟುವಟಿಕೆಯು ಪ್ರಯೋಜನಾಶೂನ್ಯವಾಗಿದೆ ಎಂದರು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿ ಮಾತನಾಡಿದರು. ನವಾಝ್ ಸಖಾಫಿ ಅಲ್ ಅಂಜದಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ತರಗತಿ ನಡೆಸಿ ಪ್ರೊಲಾಝ್ ಕ್ಯಾಂಪಿನ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಜಲೀಲ್ ಕರೋಪಾಡಿಯ ಮೇಲೆ ತಹ್ಲೀಲ್ ಹೇಳಿ ದುವಾ ನೆರವೇರಿಸಲಾ ಯಿತು.
ಈ ಸಂದರ್ಭದಲ್ಲಿ ಕೆ ಸಿ ಎಫ್ ದುಬೈ ಅಲ್ ಐನ್ ಕಾರ್ಯಕರ್ತ ಮುನೀರ್ ಸುಂದರಿಭಾಗ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಮುಸ್ತಫ ಮಾಸ್ಟರ್ ಉಳ್ಳಾಲ, ಎಸ್ ವೈ ಎಸ್ ಕೋಡಿ, ಕೋಟೆಪುರ ಬ್ರಾಂಚ್ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಸದಸ್ಯರಾದ ರಶೀದ್ ಪೇಟೆ, ಝಿಯಾದ್ ಮೇಲಂಗಡಿ, ಸತ್ತಾರ್ ಮೇಲಂಗಡಿ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಸದಸ್ಯರಾದ ನಝೀರ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮಿಕ್ದಾದ್ ಮುಕ್ಕಚ್ಚೇರಿ, ಅತೀಖ್ ಕೋಡಿ, ಸೆಕ್ಟರ್ ಜೊತೆ ಕಾರ್ಯದರ್ಶಿ ಇಕ್ಬಾಲ್ ಒಂಭತ್ತುಕೆರೆ, ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಫಾಳಿಲ್ ಮೇಲಂಗಡಿ, ಎಸ್ ಬಿ ಎಸ್ ಸಂಚಾಲಕ ಮುಹಾಝ್ ಮೇಲಂಗಡಿ, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್, ಕೋಡಿ ಶಾಖಾಧ್ಯಕ್ಷ ಹಾಶಿರ್, ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಮೇಲಂಗಡಿ ಶಾಖಾ ಕಾರ್ಯದರ್ಶಿ ತಶ್ರೀಫ್ ಮೇಲಂಗಡಿ, ಶಾಖಾ ಉಪಾಧ್ಯಕ್ಷ ಹಸೈನಾರ್ ಉಸ್ತಾದ್, ಸುಂದರಭಾಗ್ ಶಾಖಾಧ್ಯಕ್ಷ ಸಯೀದ್ ಅಬೂಬಕರ್, ಪ್ರಧಾನ ಕಾರ್ಯದರ್ಶಿ ಅಫ್ರಿದ್, ಜೊತೆಕಾರ್ಯದರ್ಶಿ ಸೈಫುದ್ದೀನ್, ಎಸ್ ಬಿ ಎಸ್ ಸುಂದರಭಾಗ್ ಸಂಚಾಲಕ ಹಫೀಝ್, ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಶಾಖಾ ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ, ಅಕ್ಕರೆಕೆರೆ ಎಸ್ ಬಿ ಎಸ್ ಸಂಚಾಲಕ ಇರ್ಫಾನ್, ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಒಂಭತ್ತುಕೆರೆ, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ, ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಹಾಗು ಸೆಕ್ಟರ್ ಅಧೀನದ ಇನ್ನಿತರ ನಾಯಕರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು. ಸೆಕ್ಟರ್ ಕಾರ್ಯದರ್ಶಿ ಹಂಝ ಸುಂದರಿಭಾಗ್ ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು.