ದ್ವಿತೀಯ ಪಿಯು ಫಲಿತಾಂಶ: ತುಂಬೆ ಬಿ.ಎ. ಕಾಲೇಜಿಗೆ 96 ಶೇಕಡ
ಬಂಟ್ವಾಳ, ಮೇ 11: ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತುಂಬೆ ಬಿ.ಎ. ಕಾಲೇಜಿನಿಂದ 135 ವಿದ್ಯಾರ್ಥಿಗಳು ಹಾಜರಾಗಿದ್ದು ಅವರಲ್ಲಿ 130 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 96 ಫಲಿತಾಂಶ ಪಡೆದಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ವಿಜ್ಞಾನ ವಿಭಾಗದಲ್ಲಿ ಶಾಮಿಯತ್ ನುಸೈಬಾ 578 ಅಂಕ ಗಳಿಸಿದ್ದು, ಗಣಿತ ಮತ್ತು ಭೌತಶಾಸ್ತ್ರದಲ್ಲಿ 100 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸನೀನಾ 546 ಅಂಕಗಳೊಂದಿಗೆ ಕಾಲೇಜಿಗೆ ದ್ವಿತೀಯ ಹಾಗೂ ಆಯಿಷಾ ಹನ್ನತ್ ಜೀವಶಾಸ್ತ್ರದಲ್ಲಿ 100 ಅಂಕ ಪಡೆದಿದ್ದು, 515 ಅಂಕ ಗಳಿಸಿ ತೃತೀಯಾ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಿಂದ 31 ವಿದ್ಯಾರ್ಥಿಗಳು ಹಾಜರಾಗಿ 28 ಮಂದಿ ಉತ್ತೀರ್ಣರಾಗಿ ಶೇಕಡ 90 ಫಲಿತಾಂಶ ಸಾಧಿಸಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ನೆಹಲ್ 537 ಅಂಕ ಗಳಿಸಿ ಪ್ರಥಮ ಸ್ಥಾನ, ಸ್ವಾತಿ ಎಸ್. 521 ಅಂಕಗಳಿಸಿ ದ್ವಿತೀಯ ಹಾಗೂ ಹರೀಶ್ ಟಿ.ಸಿ. 510 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಿಂದ 68 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಸಾಧಿಸಿದೆ.
ಕಲಾ ವಿಭಾಗದಲ್ಲಿ ಎನ್. ಲಕ್ಷತಾ 511 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಹಾಗೂ ಉನೈಸಾ 508 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಿಂದ 36 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 34 ಮಂದಿ ಉತ್ತೀರ್ಣರಾಗಿ ಶೇಕಡ 94 ಫಲಿತಾಂಶ ಪಡೆದುಕೊಂಡಿದ್ದಾರೆ.