ಆಳ್ವಾಸ್ ಕಾಲೇಜಿನ ಅಂಧ ವಿದ್ಯಾರ್ಥಿ ಪ್ರಕಾಶ್ ರ ವಿಶಿಷ್ಟ ಸಾಧನೆ
Update: 2017-05-11 21:03 IST
ಮೂಡುಬಿದಿರೆ, ಮೇ 11: ಆಳ್ವಾಸ್ ಪಿಯು ಕಾಲೇಜಿನ ಪ್ರಕಾಶ್ ಬಲಗಣ್ಣೂರು ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 553 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ.
ಪೂರ್ಣ ಪ್ರಮಾಣದ ಅಂಧತ್ವ ಹೊಂದಿರುವ ಪ್ರಕಾಶ್ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರು. ಇವರು ಕಾಲೇಜಿನ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆದಿದ್ದು, ಪ್ರಕಾಶ್ ಅವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.