ಉಪವಾಸ ನಿರತ ಫೆಲೆಸ್ತೀನ್ ನಾಯಕನ ಭೇಟಿ ಅನುಮತಿ ರದ್ದು : ವಕೀಲ ಆರೋಪ

Update: 2017-05-11 15:56 GMT

ಜೆರುಸಲೇಂ, ಮೇ 11: ಇಸ್ರೇಲ್‌ನ ಜೈಲುಗಳಲ್ಲಿ ನಡೆಯುತ್ತಿರುವ ಫೆಲೆಸ್ತೀನ್ ಕೈದಿಗಳ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿರುವ ಮರ್ವನ್ ಬರ್ಘೌಟಿಯನ್ನು ಭೇಟಿಯಾಗುವ ತನ್ನ ಪೂರ್ವ ನಿಗದಿತ ಕಾರ್ಯಕ್ರಮವನ್ನು ಇಸ್ರೇಲ್ ರದ್ದುಪಡಿಸಿದೆ ಎಂದು ವಕೀಲರೊಬ್ಬರು ಆರೋಪಿಸಿದ್ದಾರೆ.

24 ದಿನಗಳ ಹಿಂದೆ ನೂರಾರು ಫೆಲೆಸ್ತೀನ್ ಕೈದಿಗಳು ಉಪವಾಸ ಮುಷ್ಕರ ಆರಂಭಿಸಿದಂದಿನಿಂದ, ಬರ್ಘೌಟಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.

58 ವರ್ಷದ ಬರ್ಘೌಟಿಯನ್ನು ತಾನು ಗುರುವಾರ ಭೇಟಿಯಾಗಬಹುದು ಎಂದು ಇಸ್ರೇಲ್ ಜೈಲು ಇಲಾಖೆ ಆರಂಭದಲ್ಲಿ ತನಗೆ ತಿಳಿಸಿತ್ತು ಎಂದು ವಕೀಲ ಖಾದರ್ ಶಕೀರತ್ ತಿಳಿಸಿದರು. ಆದರೆ, ಅನುಮತಿಯನ್ನು ಒಮ್ಮೆಲೆ ರದ್ದುಪಡಿಸಲಾಗಿದೆ ಎಂದರು.

ಎಪ್ರಿಲ್ 17ರಿಂದ ಏಕಾಂತ ಕೋಣೆಯಲ್ಲಿರುವ ತನ್ನ ಕಕ್ಷಿದಾರನ ಆರೋಗ್ಯದ ಬಗ್ಗೆ ತಾನು ಚಿಂತಿತನಾಗಿದ್ದೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News