×
Ad

"ಐಕಾನ್ ಗ್ಯಾಲಕ್ಸಿ" ವಾಣಿಜ್ಯ ಸಂಕೀರ್ಣಕ್ಕೆ ಶಿಲಾನ್ಯಾಸ

Update: 2017-05-11 22:42 IST

ಮಂಗಳೂರು, ಮೇ 9: ನಗರದ ಕಟ್ಟಡ ನಿರ್ಮಾಣ ಸಂಸ್ಥೆ ಎಚ್‌ಎನ್‌ಜಿಸಿ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ವತಿಯಿಂದ ಸುರತ್ಕಲ್ ರೈಲ್ವೆ ಕ್ರಾಸ್ ಬಳಿ ನಿರ್ಮಿಸಲು ಉದ್ದೇಶಿಸಿರುವ ‘ಐಕಾನ್ ಗ್ಯಾಲಕ್ಸಿ’ ವಾಣಿಜ್ಯ ಸಂಕೀರ್ಣಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿತು.

ಎರಡು ಅಂತಸ್ತಿನ ಈ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್, ಕೃಷ್ಣಾಪುರ ಖಾಝಿ ಇಬ್ರಾಹೀಂ ಮುಸ್ಲಿಯಾರ್, ಕಾರ್ಪೊರೇಟರ್ ಗುಣಕರ ಶೆಟ್ಟಿ, ಅಯಾಝ್, ಪುರುಷೋತ್ತಮ ಚಿತ್ರಾಪುರ, ವರದರಾಜ ಎಚ್.ಕುತ್ತೆತ್ತೂರು, ಕಸಪಾ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಎಚ್‌ಎನ್‌ಜಿಸಿ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಸಂಸ್ಥೆಯ ಪಾಲುದಾರರಾದ ಇಸ್ಮಾಯೀಲ್ ಅಹ್ಮದ್, ಇಮ್ತಿಯಾಝ್ ಅಹ್ಮದ್, ಬಿ.ಎಸ್.ಮನ್ಸೂರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮೊಯ್ದಿನ್ ಬಾವ ಮತ್ತು ಖಾಝಿ ಇಬ್ರಾಹೀಂ ಮುಸ್ಲಿಯಾರ್ ಅವರು ವಾಣಿಜ್ಯ ಸಂಕೀರ್ಣವು ಶೀಘ್ರ ನಿರ್ಮಾಣಗೊಳ್ಳಲಿ ಎಂದು ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News