ಭಟ್ಕಳ: ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜಿಗೆ ಉತ್ತಮ ಫಲಿತಾಂಶ

Update: 2017-05-11 17:31 GMT

ಭಟ್ಕಳ, ಮೇ 11: ಇಲ್ಲಿನ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜಿನ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 94.28% ಮತ್ತು ವಾಣಿಜ್ಯ ವಿಭಾಗದಲ್ಲಿ 91.3% ಫಲಿತಾಂಶ ದಾಖಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ಶ್ರೇಯಾ ಪೈ 96% ದೊಂದಿಗೆ ಪ್ರಥಮ, ಕಸ್ತೂರಿದಾಸ ಮತ್ತು ಮೇದಿನಿ ಭಟ್ 94% ದೊಂದಿಗೆ ದ್ವಿತೀಯ ಮತ್ತು ನಿಧಿ ಪ್ರಭು 93% ದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಅರ್ಚನಾ ಶೇಟ್ 93.16% ನೊಂದಿಗೆ ಪ್ರಥಮ, ರಾಜೇಶ ನಾಯ್ಕ 91.5% ನೊಂದಿಗೆ ದ್ವೀತಿಯ ಮತ್ತು ನಾಗರಾಜ ಶಾನಭಾಗ 90.16% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಕಲಾ ವಿಭಾಗದಲ್ಲಿ ಹಿತಾಕ್ಷಿ ಮೋಗೆರ 86% ನೊಂದಿಗೆ ಪ್ರಥಮ, ರಮ್ಯ ಮೋಗೆರ 82% ನೊಂದಿಗೆ ದ್ವೀತಿಯ ಮತ್ತು ಯಮುನಾ ಮರಾಠಿ 77% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳಾದ ನಿಧಿ ಪ್ರಭು ಭೌತಶಾಸ್ತ್ರ ಮತ್ತು ಸುಶ್ಮಿತಾ ಖಾರ್ವಿ ಲೆಕ್ಕಶಾಸ್ತ್ರ ವಿಷಯದಲ್ಲಿ 100/100 ಅಂಕಗಳನ್ನು ಪಡೆದುಕೊಂಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News