×
Ad

ಬೈಕ್ ಢಿಕ್ಕಿ: ಮಹಿಳೆಗೆ ಗಂಭೀರ ಗಾಯ

Update: 2017-05-11 23:35 IST

ಮಂಗಳೂರು, ಮೇ 11: ನಗರದ ಕಲ್ಲಾಪು ಆಡಂಕುದ್ರು ಬಳಿ ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರಿಗೆ ಬೈಕ್ ಸವಾರ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಬುಧವಾರ ನಡೆದಿದೆ.

ಗಾಯಗೊಂಡಿರುವ ಮಹಿಳೆಯನ್ನು ಗದಗ ಮೂಲದ, ಪ್ರಸ್ತುತ ಶಕ್ತಿನಗರದ ಟೆಂಟ್‌ವೊಂದರಲ್ಲಿ ನೆಲೆಸಿರುವ ಸುಮಿತ್ರಾ (45) ಎಂದು ಗುರುತಿಸಲಾಗಿದೆ.

ಕೂಲಿ ಕೆಲಸಕ್ಕೆಂದು ಗದಗದಿಂದ ತನ್ನ ಸೋದರ ಮಾವ ಹಾಗೂ ಇಬ್ಬರು ಮಕ್ಕಳೊಂದಿಗೆ ಮಂಗಳೂರಿಗೆ ಬಂದಿದ್ದರು. ಬುಧವಾರ ಬೆಳಗ್ಗೆ 8:30ರ ಸುಮಾರಿಗೆ ಆಡಂಕುದ್ರು ಬಳಿ ರಸ್ತೆ ದಾಟುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದ ಬೈಕ್ ಸವಾರನೊಬ್ಬ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಆಕೆಯ ಮೊಣಕಾಲಿಗೆ ಗಂಭೀರ ಗಾಯವಾಗಿದೆ. ಬೈಕ್ ಸವಾರ ಪರಾರಿಯಾಗಿದ್ದಾನೆ. ಗಾಯಾಳುವನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News