×
Ad

ಸ್ಥಾನದಲ್ಲಿ ಏರಿಕೆ: ಶೇಕಾಡವಾರು ಫಲಿತಾಂಶದಲ್ಲಿ ಕುಸಿತ

Update: 2017-05-12 16:45 IST

ಮಂಗಳೂರು, ಮೇ 12: ದಕ್ಷಿಣ ಕನ್ನಡ ಜಿಲ್ಲೆ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ ಎಂಬ ಖುಷಿ ಇದೆಯಾದರೂ, ಶೇಕಡವಾರು ಫಲಿತಾಂಶದಲ್ಲಿ ಸುಮಾರು ಶೇ. 8ರಷ್ಟು ಕುಸಿತ ಕಂಡಿದೆ.

ಪ್ರಸಕ್ತ ಸಾಲಿನಲ್ಲಿ ಶೇ. 82.39 ಅಂಕಗಳನ್ನು ಪಡೆದಿದ್ದು, ಕಳೆದ ಬಾರಿ ಶೇ. 88.18 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿ ದ.ಕ. ಜಿಲ್ಲೆ ರಾಜ್ಯದಲ್ಲಿ ಗಮನ ಸೆಳೆದಿತ್ತು. ಪ್ರಸಕ್ತ ಸಾಲಿನಲ್ಲಿ 625 ಅಂಕಗಳೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಹಂಚಿಕೊಂಡ ಮೂವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದ ಸೈಂಟ್ ಜೋಕಿಮ್ಸ್ ಹೈಸ್ಕೂಲ್‌ನ ವಿದ್ಯಾರ್ಥಿ ಪೂರ್ಣಾನಂದ ಎಚ್. ಹಾಗೂ 624 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಗಳಾಗಿ ಹೊರ ಹೊಮ್ಮಿರುವವರಲ್ಲಿ ಸೈಂಟ್ ಆ್ಯಗ್ನೆಸ್ ಆಂಗ್ಲ ಮಾಧ್ಯಮ ಶಾಲೆಯ ಜಯನಿ ಆರ್. ನಾಥ್ ಸೇರಿರುವುದು ಹೆಮ್ಮೆಯ ಸಂಗತಿ.

ಕನ್ನಡ ಮಾಧ್ಯಮದ ವಿದ್ಯಾರ್ಥಿಯ ಸಾಧನೆ

  ರಾಜ್ಯಕ್ಕೆ ಪ್ರಥಮ ಸ್ಥಾನಿಗಳಲ್ಲಿ ಓರ್ವರಾಗಿರುವ ಕಡಬದ ಸೈಂಟ್ ಜೋಕಿಮ್ಸ್ ಹೈಸ್ಕೂಲ್‌ನ ವಿದ್ಯಾರ್ಥಿ ಪೂರ್ಣಾನಂದ ಎಚ್. ಕನ್ನಡ ಮಾಧ್ಯಮ ವಿದ್ಯಾರ್ಥಿ ಎಂಬುದು ಮತ್ತೊಂದು ಸಂತಸಕರ ಸುದ್ದಿ.

2014-15ರಲ್ಲಿ ದ.ಕ. ಜಿಲ್ಲೆ 8ನೆ ಸ್ಥಾನದಲ್ಲಿತ್ತು. 2013-14ರಲ್ಲಿ 29ನೆ ಸ್ಥಾನಕ್ಕೆ ಕುಸಿದಿತ್ತು. 2012-13ರಲ್ಲಿ 5ನೆ ಸ್ಥಾನದಲ್ಲಿದ್ದು, 2011-12ರಲ್ಲಿ 7ನೆ ಸ್ಥಾನದಲ್ಲಿ ಹಾಗೂ 2011-12ರಲ್ಲಿ ಜಿಲ್ಲೆ 21ನೆ ಸ್ಥಾನದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News