ಎಸೆಸೆಲ್ಸಿ ಪರೀಕ್ಷೆ: ಎಂಡೋಸಲ್ಫಾನ್ ಪೀಡಿತ ದೃಷ್ಟಿಹೀನ ವಿದ್ಯಾರ್ಥಿಯ ಅಪೂರ್ವ ಸಾಧನೆ
Update: 2017-05-12 17:44 IST
ಬೆಳ್ತಂಗಡಿ, ಮೇ 12: ತಾಲೂಕಿನ ಪುತ್ತಿಲ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ತಲ್ಹತ್ ಎಚ್. ಎಸೆಸೆಲ್ಸಿ ಪರೀಕ್ಷೆಯಲ್ಲಿ 449 (71.51%) ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ. ಹುಟ್ಟಿನಿಂದಲೇ ಎಂಡೋಸಲ್ಫಾನ್ ಬಾಧೆ ತುತ್ತಾಗಿ ದೃಷ್ಟಿ ಹೀನರಾಗಿರುವ ತಲ್ಹತ್ ಬಾರ್ಯ ಗ್ರಾಮದ ಬೇಂಗಿಲ ನಿವಾಸಿ ಆದಂ ಮತ್ತು ಹಾಝಿರಾ ಅವರ ಐದನೆಯ ಪುತ್ರ.
ಶಾಲಾ ಪ್ರಾಂಶುಪಾಲರಾದ ಪೂರ್ಣಿಮಾ ಮತ್ತು ಶಿಕ್ಷಕರ ಪ್ರಯತ್ನವು ಫಲ ನೀಡಿದೆ. ತನಗಾಗಿ ಅವರು ವಿಶೇಷ ತರಗತಿಗಳನ್ನು ನಡೆಸಿದ್ದರು. ಅವರ ಪೂರ್ಣ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ತಲ್ಹತ್ ಹೇಳಿದ್ದಾರೆ. ಧಾರ್ಮಿಕ ಮತ್ತು ಶಾಲಾ ವಿದ್ಯಾಭ್ಯಾಸ ಜೊತೆಯಾಗಿಯೇ ನಿರ್ವಹಿಸುವ ಬಯಕೆ ತಲ್ಹತ್ ಗೆ ಇದ್ದು, ಕಲಾ ವಿಭಾಗದ ಆಯ್ಕೆಯೊಂದಿಗೆ ಪತ್ರಿಕೋದ್ಯಮ ವಿಭಾಗ ಸೇರಿಕೊಳ್ಳಬೇಕೆಂದುಕೊಂಡಿದ್ದಾರೆ.