×
Ad

ಎಸೆಸೆಲ್ಸಿ ಪರೀಕ್ಷೆ: ಖೈರಿಯಾ ಶೆಲ್ಟರ್ ವಿದ್ಯಾರ್ಥಿನಿಯರ ಸಾಧನೆ

Update: 2017-05-12 18:01 IST
ಜೆಸೀನಾ

ತೊಕ್ಕೊಟ್ಟು, ಮೇ 12: ಇಲ್ಲಿಗೆ ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ಅಧೀನದಲ್ಲಿರುವ ಖೈರಿಯಾ ಶೆಲ್ಟರ್ ಇದರ ಅನಾಥ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಸಂಸ್ಥೆಯಲ್ಲಿರುವ, ಎಸೆಸೆಲ್ಸಿ ಪರೀಕ್ಷೆ ಬರೆದ 8 ವಿದ್ಯಾರ್ಥಿನಿಯರಲ್ಲಿ 1 ವಿದ್ಯಾರ್ಥಿನಿ ವಿಶಿಷ್ಟ ಶ್ರೇಣಿಯಲ್ಲಿ ಮತ್ತು ಐವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಹಳೆಕೋಟೆಯ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಜೆಸೀನಾ 533, ಹಸೀನಾ ಬಾನು 460, ಫಾತಿಮತ್ ಹಫೀಝಾ 445, ಮುಬೀನಾ 422  ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News