ನದಿಯಲ್ಲಿ ಮುಳುಗಿ ಬಾಲಕರಿಬ್ಬರು ಮೃತ್ಯು
Update: 2017-05-12 21:22 IST
ಕಡಬ, ಮೇ 12: ಸ್ನಾನಕ್ಕೆಂದು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನೂಜಿಬಾಳ್ತಿಲ ಗ್ರಾಮದ ಅಡೆಂಜ ತೂಗುಸೇತುವೆ ಸಮೀಪ ಶುಕ್ರವಾರ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಲಾಲ ನಿವಾಸಿ ಅಬ್ರಹಾಂ ಎಂಬವರ ಪುತ್ರ ಅಮಿತ್(18) ಹಾಗೂ ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದ ಕಜೆ ನಿವಾಸಿ ವರ್ಗೀಸ್ ಎಂಬವರ ಪುತ್ರ ಬಿನು(16) ಎಂದು ಗುರುತಿಸಲಾಗಿದೆ.
ಶಾಲೆಗೆ ರಜೆಯಾದುದರಿಂದ ಮಕ್ಕಳು ಅಜ್ಜನ ಮನೆಗೆಂದು ಬಂದಿದ್ದು, ತನ್ನ ಮಾವನೊಂದಿಗೆ ಶುಕ್ರವಾರ ಸಂಜೆ ಸ್ನಾನಕ್ಕೆಂದು ನದಿಗೆ ತೆರಳಿದ್ದರು. ಆದರೆ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.