5ನೆ ತರಗತಿಯಲ್ಲಿ ಅನುತ್ತೀರ್ಣನಾಗಿ ಎಸೆಸೆಲ್ಸಿ ಪಾಸಾದ ಅಖಿಲ್
Update: 2017-05-12 21:44 IST
ಮಂಗಳೂರು, ಮೇ 12: 5ನೆ ತರಗತಿಯಲ್ಲಿ ಅನುತ್ತೀರ್ಣನಾಗಿ ನಗರದ ನ್ಯಾಷನಲ್ ಟ್ಯುಟೋರಿಯಲ್ ಕಲಿತು ನೇರವಾಗಿ 10ನೆ ತರಗತಿ ಪರೀಕ್ಷೆ ಬರೆದ ಅಖಿಲ್ ಉತ್ತಮ ಸಾಧನೆ ಮಾಡಿದ್ದಾರೆ.
5ನೆ ತರಗತಿ ಫೇಲಾಗಿದ್ದ ಅಖಿಲ್ ನ್ಯಾಷನಲ್ ಟ್ಯುಟೋರಿಯಲ್ ಗೆ ಸೇರಿ 2017ನೆ ಸಾಲಿನ ಪಬ್ಲಿಕ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ ಎಂದು ನ್ಯಾಷನಲ್ ಟ್ಯುಟೋರಿಯಲ್ ಸಂಸ್ಥೆಯ ಪ್ರಾಂಶುಪಾಲ ಯು.ಎಚ್. ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.