×
Ad

ಮೂಡುಬಿದಿರೆ ರೋಟರಿ ಪ್ರೌಢಶಾಲೆಗೆ ಸತತ 10ನೆ ಬಾರಿ ಶೇ. 100 ಫಲಿತಾಂಶ

Update: 2017-05-12 22:01 IST

ಮೂಡುಬಿದಿರೆ, ಮೇ 12: ರೋಟರಿ ಎಜುಕೇಶನ್ ಸೊಸೈಟಿ ಇದರ ಆಡಳಿತಕ್ಕೊಳಪಟ್ಟ ರೋಟರಿ ಪ್ರೌಢಶಾಲೆಯು ಸತತ 10ನೆ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದೆ.

ಸಂಸ್ಥೆಯಲ್ಲಿ ಈ ಬಾರಿ ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 66 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 76 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಆದಿತ್ಯ ಸುಬ್ರಹ್ಮಣ್ಯ ಭಟ್ 617 (98.72%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಕೆ. ದಿವ್ಯಾ ಪೈ ಮತ್ತು ಶ್ರೇಯಸ್ ಕಾರಂತ್ ತಲಾ 614 ಅಂಕಗಳನ್ನು ಪಡೆಯುವುದರೊಂದಿಗೆ ದ್ವಿತೀಯ ಸ್ಥಾನವನ್ನು ಹಾಗೂ ಅಶ್ವಿನ್ ಕೆ.- 612, ಅಂಕಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.

10 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗೆ ಮೇಲ್ಪಟ್ಟು ಅಂಕಗಳನ್ನು ಗಳಿಸಿರುತ್ತಾರೆ. ಉತ್ತಮ ಫಲಿತಾಂಶವನ್ನು ತರುವಲ್ಲಿ ಶ್ರಮಿಸಿದ ವಿದ್ಯಾರ್ಥಿಗಳನ್ನು ಮತ್ತು ಅದ್ಯಾಪಕ ವೃಂದದವರನ್ನು ಶಾಲಾ ಆಡಳಿತ ಮಂಡಳಿಯು ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News