ಮನೆ, ಶೋರೂಂಗೆ ನುಗ್ಗಿ ನಗ-ನಗದು ಕಳವು
Update: 2017-05-12 22:43 IST
ಕುಂದಾಪುರ, ಮೇ 12: ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬರೆಕಟ್ಟು ರಸ್ತೆ ಕುಂದೇಶ್ವರ ದೇವಸ್ಥಾನದ ಬಳಿಯ ಮನೆ ಹಾಗೂ ಶೋರೂಂಗೆ ಮೇ 11ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ನಗ ನಗದು ಕಳವುಗೈದಿದ್ದಾರೆ.
ಕುಂದೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಅದ್ವೈತ್ ಜೆಸಿಬಿ ಶೋ ರೂಂ ನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕ್ಯಾಶ್ ಕೌಂಟರ್‌ನಲ್ಲಿ ಇರಿಸಿದ್ದ 1,34,420 ರೂ. ನಗದು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಮೀಪದ ಚಂದ್ರ ಕೊಡೇರಿ ಎಂಬವರ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯ ರೂಮಿನಲ್ಲಿ ಇರಿಸಿದ್ದ ಮರದ ಹಾಗೂ ಕಬ್ಬಿಣದ ಕಪಾಟನ್ನು ಒಡೆದು, ಅದರಲ್ಲಿದ್ದ ಒಟ್ಟು ಸುಮಾರು 18 ಪವನ್ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ವೌಲ್ಯ 2,50,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.