ಬಾವಿಗೆ ಬಿದ್ದು ಮೃತ್ಯು
Update: 2017-05-12 22:48 IST
ಹೆಬ್ರಿ, ಮೇ 12: ಕೆರೆಬೆಟ್ಟು ಎಂಬಲ್ಲಿ ಮೇ 8ರಂದು ಮನೆಯ ಸಮೀಪದ ಬಾವಿಯ ಆವರಣದ ಮೇಲೆ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಸುಮಾರು 25 ಅಡಿ ಆಳದ ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗುಲಾಬಿ ಎಂಬವರ ಪುತ್ರ ದಿನೇಶ್ ಎಸ್.ಮಾಡ(35) ಮೇ 11ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.