ಎಸೆಸೆಲ್ಸಿ: 606 ಅಂಕ ಗಳಿಸಿದ ಕನ್ಯಾನದ ಹುಡುಗ ಮುಹಮ್ಮದ್ ಶಾಝಿಲ್
Update: 2017-05-12 23:25 IST
ಬಂಟ್ವಾಳ, ಮೇ 12: ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಟ್ಲ ಜೆ.ಸಿ. ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಾಝಿಲ್ 606 (96.96%) ಅಂಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ.
ಕನ್ಯಾನ ಗ್ರಾಮದ ಡಿ.ಕೆ.ಅಬ್ದುಲ್ ಲತೀಫ್ ಹಾಜಿ ಮತ್ತು ಝರೀನಾ ದಂಪತಿಯ ಪುತ್ರನಾದ ಶಾಝಿಲ್ ಕನ್ನಡದಲ್ಲಿ 123, ಇಂಗ್ಲಿಷ್ ನಲ್ಲಿ 98, ಹಿಂದಿಯಲ್ಲಿ 100, ಗಣಿತದಲ್ಲಿ 97, ವಿಜ್ಞಾನದಲ್ಲಿ 90 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.