623 ಅಂಕ ಗಳಿಸಿದ ಆ್ಯಶ್ಲಿನ್‌ಗೆ ಫಾರ್ಮಸಿ ಬಗ್ಗೆ ಒಲವು
ಮಂಗಳೂರು, ಮೇ 12: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕಗಳೊಂದಿಗೆ ರಾಜ್ಯದ ತೃತೀಯ ಟಾಪರ್‌ಗಳ ಪಟ್ಟಿಯಲ್ಲಿರುವ ನಗರದ ಸೈಂಟ್ ಆ್ಯಗ್ನೆಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಆ್ಯಶ್ಲಿನ್ ಜಾನೆ ರ್ಯಾಚೆಲ್ ಪಿಂಟೋ ಭವಿಷ್ಯದಲ್ಲಿ ಫಾರ್ಮಸಿ ಕ್ಷೇತ್ರವನ್ನು ಆಯ್ದುಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.
"ವಾರ್ತಾಭಾರತಿ" ಜತೆ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘‘ಉತ್ತಮ ಅಂಕಗಳನ್ನು ನಿರೀಕ್ಷಿಸಿದ್ದೆ. ಮುಂದೆ ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ) ವಿಭಾಗವನ್ನು ಆಯ್ದುಕೊಂಡಿದ್ದೇನೆ. ನನಗೆ ವೈದ್ಯಕೀಯ ಅಥವಾ ಇಂಜಿನಿಯರ್ ಕ್ಷೇತ್ರಕ್ಕಿಂತಲೂ ಫಾರ್ಮಸಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಸಕ್ತಿ ಇದೆ. ರಸಾಯನಶಾಸ್ತ್ರ ನನಗೆ ಇಷ್ಟವಾದ ವಿಷಯ. ಈ ಬಗ್ಗೆ ಮುಂದೆ ಸ್ಪಷ್ಟವಾದ ನಿರ್ಧಾರವಿನ್ನೂ ಮಾಡಿಲ್ಲ’’ಎಂದು ಅವರು ಹೇಳಿದ್ದಾರೆ.
ಮೇರಿಹಿಲ್‌ನ ನಿವಾಸಿಯಾಗಿರುವ ಆ್ಯಶ್ಲಿನ್‌ರ ತಂದೆ ಅನಿಲ್ ಜಾಯ್ ಪಿಂಟೋ ಎಂಸಿಎಫ್‌ನಲ್ಲಿ ಉದ್ಯೋಗದಲ್ಲಿದ್ದು, ತಾಯಿ ನಿರ್ಮಲಾ ಡಿಸೋಜಾ ಕೆಥೊಲಿಕ್ ಬೋರ್ಡ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.