ಹಾಜಿಮಸ್ತಾನ್‌ರನ್ನು ಭೂಗತ ಜಗತ್ತಿನ ಡಾನ್‌ಆಗಿ ಚಿತ್ರೀಕರಿಸುವಂತಿಲ್ಲ: ರಜನೀಕಾಂತ್‌ಗೆ ನೋಟೀಸು
ಹೊಸದಿಲ್ಲಿ, ಮೇ 13: ಸೂಪರ್ ಸ್ಟಾರ್ ರಜನೀಕಾಂತ್‌ರಿಗೆ ವಕೀಲ್ ನೋಟಿಸು ಕಳುಹಿಸಲಾಗಿದೆ. ಜಾಜಿ ಮಸ್ತಾನ್ ಮಿರ್ಝಾರ ಜೀವನ ಕತೆ ಹೇಳುವ ಸಿನೆಮಾದಲ್ಲಿ ಅವರನ್ನು ಭೂಗತಜಗತ್ತಿನ ಡಾನ್ ಆಗಿ ಚಿತ್ರೀಕರಿಸಬಾರದು ಎಂದು ಮಸ್ತಾನ್‌ರ ಪುತ್ರ ಎಂದು ಹೇಳಿಕೊಳ್ಳುತ್ತಿರುವ ಸುಂದರ್ ಶೇಖರ್ ಎನ್ನುವವರು ನೋಟಿಸ್ ಕಳುಹಿಸಿದ್ದಾರೆ. ಕಬಾಲಿ ಸಿನೆಮಾದ ಬಳಿಕ ನಿರ್ದೇಶಕ ಪಾ ರಂಜಿತ್ ರಜನಿಗಾಗಿ ನಿರ್ದೇಶಿಸುತ್ತಿರುವ ಸಿನೆಮಾದಲ್ಲಿ ರಜನೀಕಾಂತ್ ಹಾಜಿಮಸ್ತಾನ್ ಆಗಿ ಪಾತ್ರವಹಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ನಮ್ಮ ಗಾಡ್‌ಫಾದರ್ ಪ್ರಮುಖ ರಾಜಕಾರಣಿ ಹಾಜಿ ಮಸ್ತಾನ್‌ರನ್ನು ದರೋಡೆಕೋರ, ಭೂಗತ ಜಗತ್ತಿನ ಡಾನ್ ಆಗಿ ಚಿತ್ರೀಕರಿಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ಬಗ್ಗೆ ತಪ್ಪಾಭಿಪ್ರಾಯ ಮೂಡುವ ರೀತಿಯಲ್ಲಿ ಸಿನೆಮಾ ಮಾಡುವುದನ್ನು ನಾವು ವೀರೋಧಿಸುತ್ತೇವೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಹಾಜಿ ಮಸ್ತಾನ್‌ರ ಜೀವನ ರೀತಿಯ ಕುರಿತು ನೀವು ಚಿತ್ರ ಮಾಡುವುದಾದರೆ ಅದರ ನಿರ್ಮಾಣದ ಹೊಣೆಯನ್ನು ನಾವು ವಹಿಸಿಕೊಳ್ಳುವೆವು ಎಂದುಸುಂದರ್ ಶೇಖರ್ ಹೇಳಿದ್ದಾರೆ. ಹಾಜಿಮಸ್ತಾನ್ ಎಂದು ತಿಳಿಯಲಾಗುವ ಮಸ್ತಾನ್ ಹೈದರ್ ಮಿರ್ಝಾ ತಮಿಳ್ನಾಡಿನವರು. ಮುಂಬೈಯಲ್ಲಿ ಬದುಕಿದ್ದ ಅವರು ಭೂಗತ ಜಗತ್ತಿನ ಡಾನ್ ಎಂದು ಕುಪ್ರಸಿದ್ಧಿ ಹೊಂದಿದ್ದಾರೆ.