ಹರ್ಯಾಣದಲ್ಲಿ ನಿರ್ಭಯಾ ಪ್ರಕರಣಕ್ಕಿಂತಲೂ ಕ್ರೂರ ಘಟನೆ
Update: 2017-05-13 17:13 IST
ಸೋನಿಪತ್(ಹರ್ಯಾಣ),ಮೇ 13: ರೋಹ್ಟಕ್‌ನಲ್ಲಿ 23ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಬಳಿಕ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆಕೆಯ ಛಿದ್ರವಿಚ್ಛಿದ್ರ ಶವ ಪತ್ತೆಯಾಗಿದೆ.
ಹತ ಮಹಿಳೆಯ ಮುಖ ಮತ್ತು ದೇಹದ ಕೆಳಭಾಗವನ್ನು ಬೀದಿನಾಯಿಗಳು ತಿಂದು ಹಾಕಿವೆ. ದಾರಿಹೋಕನೋರ್ವ ಮೇ 11ರಂದು ಈ ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ.
ಘಟನೆಗೆ ಸಂಬಂಧಿಸಿದಂತೆ ಸುಮಿತ್ ಮತ್ತು ವಿಕಾಸ್ ಎನ್ನುವವರನ್ನು ಬಂಧಿಸಲಾ ಗಿದೆ. ಈ ಪೈಕಿ ಸುಮಿತ್ ಮಹಿಳೆಗೆ ಪರಿಚಿತನಾಗಿದ್ದ ಎಂದು ಪೊಲೀಸರು ತಿಳಿಸಿದರು.
ಪತಿಯಿಂದ ವಿಚ್ಛೇದಿತಳಾಗಿದ್ದ ಮಹಿಳೆಯನ್ನು ಮೇ 9ರಂದು ಸೋನೆಪತ್‌ನಿಂದ ಅಪಹರಿಸಿ ಕಾರಿನಲ್ಲಿ ರೋಹ್ಟಕ್‌ಗೆ ಒಯ್ಯಲಾಗಿತ್ತು. ಹೆತ್ತವರು ಮಗಳ ನಾಪತ್ತೆಯ ಬಗ್ಗೆ ದೂರು ದಾಖಲಿಸಿದ್ದರು.