ದನಕಳ್ಳರ ವಿರುದ್ಧ ಕ್ರಮಕ್ಕೆ ಎಸ್.ಡಿ.ಪಿ.ಐ. ಆಗ್ರಹ
Update: 2017-05-13 17:16 IST
ಫರಂಗಿಪೇಟೆ, ಮೇ 13: ವಳಚ್ಚಿಲ್ ಪದವಿನ ಮೇರ್ಲಪದವಿನಲ್ಲಿ ಜೋಸೆಫ್ ರೆಬೆಲ್ಲೋರವರ ಎರಡು ದನವನ್ನು ಕಳ್ಳರು ಕದ್ದೊಯ್ದಿದ್ದು, ಪರಿಸರದಲ್ಲಿ ದನ, ಆಡು ಕಳವು ಹೆಚ್ಚಾಗುತ್ತಿದೆ. ಇದರಿಂದಾಗಿ ಜಾನುವಾರು ಸಾಕಣೆದಾರರು ಆತಂಕದಿಂದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್ ಡಿಪಿಐ ಅರ್ಕುಳ ಸಮಿತಿ ಹಾಗೂ ಅಡ್ಯಾರ್ ಗ್ರಾಪಂ ಸದಸ್ಯ, ಎಸ್.ಡಿ.ಪಿ.ಐ ಅಡ್ಯಾರ್ ಗ್ರಾಮ ಸಮಿತಿ ಅಧ್ಯಕ್ಷ ಯಾಸೀನ್ ಅರ್ಕುಳ ಆಗ್ರಹಿಸಿದ್ದಾರೆ