×
Ad

ಮೇ 14 - 17ರಂದು ಪೆರುವಾಯಿ ಫಾತಿಮಾ ಮಾತೆಯ ಶತಮಾನೋತ್ಸವ

Update: 2017-05-13 17:57 IST

ಬಂಟ್ವಾಳ, ಮೇ 13: ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಮಾತೆಯ ದಿವ್ಯದರ್ಶನದ ಶತಮಾನೋತ್ಸವ, ಧರ್ಮ ಕೇಂದ್ರದ ದ್ವಿದಶಮಾನೋತ್ಸವ ಹಾಗೂ ಭಾರತೀಯ ಕಥೋಲಿಕ್ ಯುವ ಸಂಚಾಲನದ ರಜತ ಮಹೋತ್ಸವವು ಮೇ 14 ಮತ್ತು 17ರಂದು ನಡೆಯಲಿದೆ ಎಂದು ಧರ್ಮಗುರು ವಿಶಾಲ್ ಮೋರಿಸ್ ತಿಳಿಸಿದರು.

ಚರ್ಚ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಭ್ರಮದ  ಸವಿ ನೆನಪಿಗಾಗಿ ಚರ್ಚ್‌ನಲ್ಲಿರುವ ಸುಮಾರು 10 ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಯೋಜನೆ ಇಟ್ಟುಕೊಳ್ಳಲಾಗಿದೆ. ಬಡತನದಿಂದ ಕೂಡಿದ ಕುಟುಂಬಗಳನ್ನು ಹೊಂದಿರುವ ನಮ್ಮ ಚರ್ಚ್‌ನಲ್ಲಿ ಜನರಿಗೆ ಆರ್ಥಿಕ ಸಂಕಷ್ಟವಿರುವ ಹಿನ್ನೆಲೆಯಲ್ಲಿ ಈ ಸಂಭ್ರಮ ಆಚರಣೆ ದಾನಿಗಳು ನೀಡುವ ಆರ್ಥಿಕ ಸಹಾಯವನ್ನು ಬಡ ಕುಟುಂಬಗಳಿಗೆ ಹಚ್ಚಲಾಗುವುದು ಎಂದು ತಿಳಿಸಿದರು.

ಮೇ 14ರಂದು ಸಂಜೆ 3 ಗಂಟೆಗೆ ಪೆರುವಾಯಿ ಗ್ರಾಮ ಪಂಚಾಯತ್ ವಠಾರದಿಂದ ಹೊರಕಾಣಿಕೆ ಮೆರವಣಿಗೆ ಹೊರಡಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಉದ್ಘಾಟಿಸಲಿದ್ದು, ಡಾ. ಮಾರ್ಕ್ ಕ್ಯಾಸ್ತಲಿನೊ ಅಧ್ಯಕ್ಷತೆ ವಹಿಸಲಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಮೇ 17ರಂದು ಬೆಳಗ್ಗೆ 10 ಗಂಟೆಗೆ ಸಾಂಪ್ರದಾಯಿಕ ಬಲಿಪೂಜೆಯನ್ನು ಮಂಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ನೆರವೇರಿಸಲಿದ್ದು, ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶಾಸಕ ಜೆ.ಆರ್ ಲೋಬೋ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೊದಲಾದವರು ಭಾಗವಹಿಸಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಮಿ ಜೋನ್ ಡಿಸೋಜ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರವಾನಾಥ ರೈ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚರ್ಚ್‌ನ ಪಾಲನ ಮಂಡಳಿ ಉಪಾಧ್ಯಕ್ಷ ರೈಮಂಡ್ ಡಿ ಸೋಜ, ಕಾರ್ಯದರ್ಶಿ ವಿಲ್ಲಿಯಂ ಡಿಸೋಜ, ಐಸಿವೈಎವ್ ಅಧ್ಯಕ್ಷ ಲೈಝಿಲ್ ಪ್ರೇವ್ ಡಿ ಸೋಜ, ಪಾಲನ ಸಮಿತಿ ಸದಸ್ಯರಾದ ಜಾನ್ಸನ್ ಮೊಂತೆರೊ, ವಿನ್ಸಂಟ್ ಡಿ ಸೋಜ, ರಾಲ್ಫ್ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News