ಮೋಹನ್ ಸಿ.ಪೂಜಾರಿಗೆ ಮಾತೃ ವಿಯೋಗ
Update: 2017-05-13 18:07 IST
ಮುಂಬೈ, ಮೇ 13: ಅಹ್ಮದಾಬಾದ್‌ನ ಹಿರಿಯ ಉದ್ಯಮಿ, ಸಮಾಜ ಸೇವಕ, ಗುಜರಾತ್ ಬಿಲ್ಲವ ಸಂಘ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಇವರ ತಾಯಿ ರಾಧು ಚಂದು ಪೂಜಾರಿ (97) ಉಡುಪಿಯ ತೆಂಕ ಎರ್ಮಾಳ್‌ನ ನಿವಾಸದಲ್ಲಿ ಬುಧವಾರ ನಿಧನರಾದರು.
ಮೃತರು ಕೃಷಿಕ ಚಂದು ಪೂಜಾರಿ ಅವರ ಪತ್ನಿಯಾಗಿದ್ದು ಇಬ್ಬರು ಪುತ್ರರು, ಐವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.