ರೋಟರಿ ಟೆಂಪಲ್ ಟೌನ್‌ನಿಂದ ಶಾಸಕ ಕೆ.ಅಭಯಚಂದ್ರ ಜೈನ್ರಿಗೆ ಸನ್ಮಾನ
Update: 2017-05-13 18:49 IST
ಮೂಡುಬಿದಿರೆ, ಮೇ 13: ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ನಲ್ಲಿ ನಡೆದ ಸ್ನೇಹಕೂಟ ಕಾರ್ಯಕ್ರಮದಲ್ಲಿ ಶಾಸಕ ಕೆ. ಅಭಯ ಚಂದ್ರ ಜೈನ್, ಕಾರ್ಮಿಕರಾದ ಜಯಂತ್‌ಗೌಡ, ವಸಂತ ಪೂಜಾರಿ ಅವರನ್ನು ಸನ್ಮಾನಿಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅಭಯ ಚಂದ್ರ ಜೈನ್, ಅಭಿವೃದ್ಧಿ ಹೊಂದುತ್ತಿರುವ ಮೂಡುಬಿದಿರೆ ರೋಟರಿ ಟೆಂಪಲ್ ಟೌನ್ ಕ್ಲಬ್ ಸಾರ್ವಜನಿಕರಿಗೆ ಪೂರಕವಾದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅನಾರೋಗ್ಯ ಪೀಡಿತರಾದ ಸಂತೋಷ್ ಕುಮಾರ್ ಅವರಿಗೆ ಧನಸಹಾಯ ಮಾಡಲಾಯಿತು. ಕ್ಲಬ್ ಅಧ್ಯಕ್ಷ ರಾಜೇಶ್ ಬಂಗೇರ ಸ್ವಾಗತಿಸಿದರು. ಉಮೇಶ್ ರಾವ್ ಮತ್ತು ರಮೇಶ್ ಕುಮಾರ್ ಸನ್ಮಾನಿತರ ಪರಿಚಯ ನೀಡಿದರು. ಕಾರ್ಯದರ್ಶಿ ಹರೀಶ್ ವಂದಿಸಿದರು.