ಇಂಡೋನೇಶ್ಯ: ಸಮುದ್ರ ತೀರದಲ್ಲಿ ನಿಗೂಢ ದೈತ್ಯ ಜೀವಿ ಪತ್ತೆ

Update: 2017-05-13 16:36 GMT

ಜಕಾರ್ತ (ಇಂಡೋನೇಶ್ಯ), ಮೇ 13: ಇಂಡೋನೇಶ್ಯದ ಹುಲುಂಗ್ ಸಮುದ್ರ ತೀರದಲ್ಲಿ ನಿಗೂಢ ಜೀವಿಯೊಂದು ಪತ್ತೆಯಾಗಿದ್ದು, ಸಮುದ್ರ ವಿಜ್ಞಾನಿಗಳು ಸ್ಥಳಕ್ಕೆ ಧಾವಿಸುತ್ತಿದ್ದಾರೆ.

ದೈತ್ಯ ಜೀವಿಯ ಕಳೇಬರವೊಂದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಸಮುದ್ರ ತೀರದಲ್ಲಿ ಮೇ 10ರಂದು ನೋಡಿದರು. ಅಂದಿನಿಂದ ಸ್ಥಳಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.

ಈ ದೈತ್ಯ ಜೀವಿಯು 15 ಮೀಟರ್ ಉದ್ದವಿದ್ದು 35 ಟನ್ ಭಾರವಿದೆ. ಅದು ಬಲೀನ್ ತಿಮಿಂಗಿಲ ಆಗಿರಬಹುದು ಎಂದು ಭಾವಿಸಲಾಗಿದೆ. ಜೀವಿಯ ಕಳೇಬರವಿರುವ ಸ್ಥಳದ ನೀರು ಕೆಂಪಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News