×
Ad

ಅಫ್ಘಾನ್: ಮಾರುಕಟ್ಟೆ ಮೇಲೆ ದಾಳಿ; 19 ಸಾವು

Update: 2017-05-13 20:28 IST

ಕಾಬೂಲ್ (ಅಫ್ಘಾನಿಸ್ತಾನ), ಮೇ 13: ಉತ್ತರ ಅಫ್ಘಾನಿಸ್ತಾನದಲ್ಲಿನ ಮಾರುಕಟ್ಟೆಯೊಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ನಾಲ್ವರು ಸೈನಿಕರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬುರ್ಕಾ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ.

ದಾಳಿ ಸಂಭವಿಸಿದ ಹಲವು ತಾಸುಗಳ ಬಳಿಕವೂ ತಾಲಿಬಾನ್ ಉಗ್ರರು ಮತ್ತು ಸೈನಿಕರ ನಡುವೆ ಭೀಕರ ಕಾಳಗ ನಡೆದಿದ್ದು, 15 ಉಗ್ರರೂ ಮೃತರಾಗಿದ್ದಾರೆ.

ಅಂತಿಮವಾಗಿ ತಾಲಿಬಾನಿಗಳು ಸ್ಥಳದಿಂದ ಹಿಮ್ಮೆಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News