ಅಂತರ್ಜಾಲದ ಜಾಲದಿಂದ ಯುವಜನಾಂಗ ಮುಕ್ತರಾಗಬೇಕು: ರಾಮಚಂದ್ರ ಮಿಜಾರ್
Update: 2017-05-13 21:45 IST
ಮೂಡುಬಿದಿರೆ, ಮೇ 13: ಯುವಜನಾಂಗಕ್ಕೆ ವಿಪುಲ ಅವಕಾಶಗಳಿವೆ. ಸಿಗುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿ ಪ್ರತಿಭೆಯನ್ನು ಬೆಳಗಿಸಬೇಕು. ಸಮಯ ಪ್ರಜ್ಞೆ ಮತ್ತು ಇತರರಿಗೆ ನಾವು ಕೊಡುವ ಗೌರವದಿಂದ ನಮ್ಮ ಜೀವನಕ್ಕೆ ಅರ್ಥ ಬರುತ್ತದೆ. ಅಂತರ್ಜಾಲದ ಜಾಲದಿಂದ ಯುವಜನಾಂಗ ಹೊರಬರಬೇಕಿದೆ ಎಂದು ಉದಯವಾಣಿ ಬಳಗದ ರಾಮಚಂದ್ರ ಮಿಜಾರ್ ಹೇಳಿದರು.
ತೋಡಾರಿನ ಯೆನಪೊಯ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ ಇದರ ವತಿಯಿಂದ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ ಸಂಭ್ರಮ-2017 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಯೆನೆಪೊಯ ಕಾಲೇಜಿನ ಪ್ರಾಶುಂಪಾಲ ಡಾ ಆರ್.ಜಿ. ಡಿಸೋಜ ಶ್ರದ್ಧೆಯಿಂದ ಗುರಿ ತಲುಪಲು ಸಾಧ್ಯ. ಸ್ವಾಬಾವಿಕ ಪ್ರತಿಭೆಗಳು ಬದುಕಿಗೆ ನಿಜವಾದ ಅರ್ಥ ನೀಡುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಜೆ.ಡಬ್ಲ್ಯೂ. ಪಿಂಟೊ ಉಪಸ್ಥಿತರಿದ್ದರು.
ಪ್ರಿಸ್ಟಂನ್ ಸ್ವಾಗತಿಸಿದರು. ಸಹನಾ ಕಾರ್ಯಕ್ರಮ ನಿರೂಪಿಸಿದರು.