×
Ad

ದ.ಕ. ಜಿಲ್ಲೆ: 53 ಶಾಲೆಗಳಿಗೆ ಶೇ. 100 ಫಲಿತಾಂಶ

Update: 2017-05-13 22:02 IST

ಮಂಗಳೂರು, ಮೇ 13: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ದ.ಕ. ಜಿಲ್ಲೆಯಲ್ಲಿ 53 ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 82.39 ಫಲಿತಾಂಶ ದಾಖಲಾಗಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದೆ.

9 ಸರಕಾರಿ ಶಾಲೆಗಳು, 1 ಅನುದಾನಿತ ಶಾಲೆ, 43 ಅನುದಾನರಹಿತ ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ. ಮಂಗಳೂರು ಉತ್ತರ ಬ್ಲಾಕ್ ವ್ಯಾಪ್ತಿಯಲ್ಲಿ 2 ಸರಕಾರಿ, 6 ಅನುದಾನರಹಿತ ಸಹಿತ 8 ಶಾಲೆಗಳು, ಮಂಗಳೂರು ದಕ್ಷಿಣ ಬ್ಲಾಕ್ ವ್ಯಾಪ್ತಿಯಲ್ಲಿ 2 ಸರಕಾರಿ, 3 ಅನುದಾನರಹಿತ ಒಟ್ಟು 5 ಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ.

ಕನ್ನಡ, ಆಂಗ್ಲ ಮಾಧ್ಯಮ ಶಾಲೆಗಳು
ದ.ಕ. ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಶೇ. 75.53 ಫಲಿತಾಂಶ ಪಡೆದರೆ, ಆಂಗ್ಲ ಮಾಧ್ಯಮ ಶಾಲೆಗಳು ಶೇ. 92.98 ಫಲಿತಾಂಶ ಪಡೆದಿವೆ. ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಕನ್ನಡ ಮಾಧ್ಯಮ ಶಾಲೆಗಳ 18,201 ವಿದ್ಯಾರ್ಥಿಗಳಲ್ಲಿ 13,747 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಗಳ 11,807 ವಿದ್ಯಾರ್ಥಿಗಳ ಪೈಕಿ 10,978 ವಿದ್ಯಾರ್ಥಿಗಳು ಉತ್ತರ್ಣರಾಗಿದ್ದಾರೆ.

ಮಂಗಳೂರು ಉತ್ತರ, ದಕ್ಷಿಣ ಬ್ಲಾಕ್‌ಗಳು
 ಮಂಗಳೂರು ಉತ್ತರ ಬ್ಲಾಕ್‌ನಲ್ಲಿ ಕನ್ನಡ ಮಾಧ್ಯಮ ಶಾಲೆಗಳ 2,411 ವಿದ್ಯಾರ್ಥಿಗಳಲ್ಲಿ 1720 ವಿದ್ಯಾರ್ಥಿಗಳು ಹಾಗೂ ಮಂಗಳೂರು ದಕ್ಷಿಣ ಬ್ಲಾಕ್‌ನಲ್ಲಿ 2992 ವಿದ್ಯಾರ್ಥಿಗಳಲ್ಲಿ 2239 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಮಂಗಳೂರು ಉತ್ತರ ಬ್ಲಾಕ್‌ನ 3285 ವಿದ್ಯಾರ್ಥಿಗಳಲ್ಲಿ 3011 ವಿದ್ಯಾರ್ಥಿಗಳು ಹಾಗೂ ದಕ್ಷಿಣ ಬ್ಲಾಕ್‌ನ 2843 ವಿದ್ಯಾರ್ಥಿಗಳ ಪೈಕಿ 2549 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಉತ್ತರ, ದಕ್ಷಿಣ ಬ್ಲಾಕ್‌ಗಳಲ್ಲಿ ಶೇ. 100 ಸಾಧನೆ ಮಾಡಿದ 13 ಶಾಲೆಗಳು
ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಕುಲಶೇಖರ, ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್, ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್, ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ-ಕಿಲ್ಪಾಡಿ ಮುಲ್ಲಿ, ಹಿರಾ ಹೆಣ್ಣುಮಕ್ಕಳ ಶಾಲೆ-ಹಿರಾನಗರ ಪೆರ್ಮನ್ನೂರು, ಮೋರಾರ್ಜಿ ದೇಸಾಯಿ ವಸತಿ ಶಾಲೆ ಮುಲ್ಕಿ, ಮೋರಾರ್ಜಿ ದೇಸಾಯಿ ವಸತಿ ಶಾಲೆ-ಕುಟಿನೊಪದವು ಮಲ್ಲೂರು, ಬಿಜಿಎಸ್ ಪ್ರೌಢ ಶಾಲೆ ಕಾವೂರು, ಸೈಂಟ್ ಆ್ಯನ್ಸ್ ಆಂಗ್ಲ ಶಾಲೆ ಕುಡುಪು, ಹೋಲಿ ಸ್ಪಿರಿಟ್ ಆಂಗ್ಲ ಶಾಲೆ ಮುಕ್ಕ, ಚೈತನ್ಯ ಪ್ರೌಢ ಶಾಲೆ- ಕೃಷ್ಣಾಪುರ ಸುರತ್ಕಲ್, ಸರಕಾರಿ ಪ್ರೌಢ ಶಾಲೆ ಕುಪ್ಪೆಪದವು, ಸರಕಾರಿ ಪ್ರೌಢ ಶಾಲೆ ನಡುಗೋಡು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News