ಆಕಾಶವಾಣಿ ಕೇಂದ್ರದ ಸೊತ್ತು ಕಳವು
Update: 2017-05-13 22:58 IST
ಬ್ರಹ್ಮಾವರ, ಮೇ 13: ಬ್ರಹ್ಮಾವರ ಆಕಾಶವಾಣಿ ಕೇಂದ್ರದ ಏರಿಯಲ್ ಪೀಲ್ಡ್ನ ಟವರ್ಸ್ ಬೇಸ್‌ಗೆ ಅಳವಡಿಸಲಾದ ಸಾವಿರಾರು ರೂ. ವೌಲ್ಯದ ತಾಮ್ರದ ಪಟ್ಟಿಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಆಕಾಶವಾಣಿ ಕೇಂದ್ರದ ಸಹಾಯಕ ಇಂಜಿನಿಯರ್ ಕೆ.ಆರ್.ತಂತ್ರಿ ಅವರು ಪರಿಶೀಲಿಸಿದಾಗ ಬೇಸ್‌ಗೆ ಭೂಮಿ ಅಡಿಯಲ್ಲಿ ಅಳವಡಿಸಿದ ತಾಮ್ರದ ಪಟ್ಟಿಗಳಲ್ಲಿ 5 ಪಟ್ಟಿಯನ್ನು ಕಾಂಕ್ರೀಟ್ ಅಗೆದು ತೆಗೆದು ಕಳವು ಮಾಡಲಾಗಿದೆ. 50 ಕೆ.ಜಿ. ತೂಕದ ಐದು ಪಟ್ಟಿಗಳ ವೌಲ್ಯ 17,500ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.