ಮನೆಗೆ ನುಗ್ಗಿ ನಗ ನಗದು ಕಳವು
Update: 2017-05-13 23:03 IST
ಬೈಂದೂರು, ಮೇ 13: ನಾವುಂದ ಗ್ರಾಮದ ಮಸ್ಕಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮಸ್ಕಿಯ ಶಿವರಾಮ ಮಧ್ಯಸ್ಥ ಎಂಬವರ ಮನೆಗೆ ನುಗ್ಗಿದ ಕಳ್ಳರು ಲಾಕ್‌ನ್ನು ಮುರಿದು ಅದರಲ್ಲಿದ್ದ 10,000ರೂ. ನಗದು, ಒಂದು ಚಿನ್ನದ ಉಂಗುರ ಹಾಗೂ ಚಿನ್ನದ ಆಭರಣಗಳನ್ನು ಕಳವು ಮಾಡಿದ್ದು, ಇವುಗಳ ಒಟ್ಟು ಮೌಲ್ಯ 24,000ರೂ. ಎಂದು ಬೈಂದೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.